ಉಜಿರೆ: ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದಿಂದ ಹೊರೆಕಾಣಿಕೆ ಸಮರ್ಪಣೆ

ಉಜಿರೆ: ಮಾ. 3 ರಿಂದ 11ರ ವರೆಗೆ ನಡೆಯುತ್ತಿರುವ ಉಜಿರೆ ಜನಾರ್ದನ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಬುಧವಾರ ಧರ್ಮಸ್ಥಳದ ವತಿಯಿಂದ ಹೊರೆಕಾಣಿಕೆ ಅರ್ಪಿಸಲಾಗುವುದು.
ಉಜಿರೆಯಲ್ಲಿ  ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಭವ್ಯಮೆರವಣಿಗೆಯಲ್ಲಿ ಜನಾರ್ದನ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಲಾಗುವುದು.

ಅಕ್ಕಿ, ಬೆಲ್ಲ, ಸಕ್ಕರೆ, ತರಕಾರಿ, ತೆಂಗಿನಕಾಯಿ, ಎಳನೀರು ಮೊದಲಾದವುಗಳನ್ನು ಹೊರೆಕಾಣಿಕೆ ಮೂಲಕ ನೀಡಲಾಗುವುದು.
ಪ್ರತಿದಿನ  ಬೆಳಿಗ್ಯೆ ಉಜಿರೆ ಹಾಗೂ ಪರಿಸರದ ಗ್ರಾಮಗಳಿಂದ ಹೊರೆಕಾಣಿಕೆ ಸಮರ್ಪಣೆಗೆ ಅವಕಾಶ ನೀಡಲಾಗಿದೆ.
ಬುಧವಾರ ಇಂದಬೆಟ್ಟು ವಲಯ, ಗುರುವಾರ ನೆರಿಯಾ ವಲಯ, ಶುಕ್ರವಾರ ಧರ್ಮಸ್ಥಳ ವಲಯ, ಶನಿವಾರ ಬದನಾಜೆ ವಲಯ, ಮಾರ್ಚ್ 9 ಸೋಮವಾರ ಕಾಶಿಬೆಟ್ಟು ವಲಯ ಹಾಗೂ ಮಾ.10 ರಂದು ಮಂಗಳವಾರ ಉಜಿರೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *