ಮೂಡುಬಿದಿರೆ: ರೇಮಂಡ್ ಡಿ’ಕುನಾ ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ತುಳು ಲಿಪಿಯ ‘ನಾಲೋದಿ ಬೊಳ್ಳಿಲು’ ಪುಸ್ತಕ ಬಿಡುಗಡೆ

ಮೂಡುಬಿದಿರೆ, ಮಾರ್ಚ್ 21: ಪ್ರಸಿದ್ಧ ಸಾಹಿತ್ಯಕರ್ತ ರೇಮಂಡ್ ಡಿ’ಕುನಾ ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ಅವರ ತುಳು ಲಿಪಿಯ ಕೃತಿ ‘ನಾಲೋದಿ ಬೊಳ್ಳಿಲು’ ಪುಸ್ತಕ ಬಿಡುಗಡೆ ಸಮಾರಂಭವು ಮಾರ್ಚ್ 22, 2026 ಭಾನುವಾರ ಬೆಳಗ್ಗೆ 10:00 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಅಭಯಚಂದ್ರ ಜೈನ್ ವಹಿಸಲಿದ್ದಾರೆ. ಪುಸ್ತಕವನ್ನು ಡಾ. ಎಂ. ಮೋಹನ್ ಆಳ್ವಾ ಬಿಡುಗಡೆ ಮಾಡಲಿದ್ದು, ಗೀತಾ ಲಕ್ಷ್ಮೀಶ್ ಶೆಟ್ಟಿ ಪುಸ್ತಕ ಪರಿಚಯ ಮಾಡಲಿದ್ದಾರೆ.

ಈ ಕಾರ್ಯಕ್ರಮವನ್ನು ತುಳುಕೂಟ (ರಿ), ಮೂಡುಬಿದಿರೆ; ವರ್ಕಿಂಗ್ ಜರ್ನಲಿಸ್ಟ್ಸ್ ಅಸೋಸಿಯೇಷನ್; ಪ್ರೆಸ್ ಕ್ಲಬ್; ಜೆಸಿಐ ಮೂಡುಬಿದಿರೆ ತ್ರಿಭುವನ್; ಅಭಿಮಾನಿ ಬಳಗ ತಾಕೊಡೆ; ಅಭಿಮಾನಿ ರಿಕ್ಷಾ ಚಾಲಕರ ಸಂಘ; ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್; ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಸೇರಿದಂತೆ ಹಲವು ಸಂಘಗಳು ಸಂಯುಕ್ತವಾಗಿ ಆಯೋಜಿಸಿವೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *