ಮಂಗಳೂರು: ಮಾಂಡ್ ಸೊಭಾಣ್ ತಿಂಗಳ ಸರಣಿಯ 294 ನೇ ಕಾರ್ಯಕ್ರಮವು ಕಲಾಂಗಣದಲ್ಲಿ ಜೂನ್ 07 ರಂದು ನಡೆಯಿತು. ಸಂಗೀತ ಉಪಕರಣಗಳ ಮಾರಾಟ ಮಳಿಗೆ ಸಿಂಫನಿ ಇದರ ಮಾಲಕ ಲೊಯ್ ನೊರೊನ್ಹಾ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷ ಲುವಿ ಪಿಂಟೊ ಮತ್ತು ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು.


ನಂತರ ಕೊಮಿಡಿ ಕಂಪೆನಿ ನಾಟಕ ತಂಡದಿಂದ ನೆಲ್ಲು ಪೆರ್ಮನ್ನೂರು ರಚಿಸಿ ನಿರ್ದೇಶಿಸಿದ ʻಉಪ್ರಾಂತ್ಚ್ ಕಳ್ಚೆಂʼ ಎಂಬ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಅಸುಂತಾ, ಸಂದೀಪ್, ಲ್ಯಾನ್ಸಿ, ದೀಪಕ್, ಮರಿಯಾ, ಜಾಸ್ಮಿನ್, ರೊಯ್ಸ್ಟನ್ ಮತ್ತು ರೊಮಾರಿಯೊ ನಟಿಸಿದರು. ರವೀನ್ ಮಾರ್ಟಿಸ್ ಸಂಗೀತ ನೀಡಿದರೆ, ಆರ್ಲ್ ಇವರು ಬೆಳಕು ನಿರ್ವಹಿಸಿದರು.
ನಂತರ ಎಲ್ರೊನ್ ರೊಡ್ರಿಗಸ್ ನೇತೃತ್ವದ ʻಮಜಾ ಮೊಗಿʼ ತಂಡದಿಂದ ಪಾರ್ಟಿ ಹಾಡುಗಳ ಗಾಯನ ನಡೆಯಿತು. ಜೊಯ್ಸ್ ಒಝೇರಿಯೊ, ರೈನಾ ಸಿಕ್ವೇರಾ ಸ್ಟೀವನ್ ಕುಟಿನ್ಹಾ, ಶಿಲ್ಪಾ ಕುಟಿನ್ಹಾ, ಸುನೀಲ್ ಮೊಂತೇರೊ,ರೊನಿ ಅರುಣ್, ವರ್ಲಿನ್ ಗೋವಿಯಸ್, ವರ್ನಾ ಡಿಸೋಜ ಇವರು ಹಾಡುಗಳಿಗೆ ದನಿಗೂಡಿದರು. ಕ್ರೀಥನ್ ಡಿಸೋಜ, ರೆನೊಲ್ಡ್ ಲೋಬೊ ಮತ್ತು ಆಸ್ಟನ್ ಡಿಸೋಜ ಸಂಗೀತದಲ್ಲಿ ಸಹಕರಿಸಿದರು.
ವಿತೊರಿ ಕಾರ್ಕಳ ಮತ್ತು ಸೃಜನಾ ಮತಾಯಸ್ ಕಾರ್ಯಕ್ರಮ ನಿರ್ವಹಿಸಿದರು.
