ವಾಮದಪದವು ಬೀಡಿ ಕಾರ್ಮಿಕರ ಚಿಕಿತ್ಸಾಲಯ ಬಂದ್

ಮಂಗಳೂರು, ಮೇ.18: ಭಾರತ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆಯ ವತಿಯಿಂದ ಬೀಡಿ ಕಾರ್ಮಿಕರಿಗಾಗಿ ಬಂಟ್ವಾಳ ತಾಲೂಕು ವಾಮದಪದವಿನಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಬೀಡಿ ಕಾರ್ಮಿಕರ ಚಿಕಿತ್ಸಾಲಯವನ್ನು ಜೂನ್ 1 ರಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ.
 

ಈ ಚಿಕಿತ್ಸಾಲಯದ ಫಲಾನುಭವಿ ಬೀಡಿ ಕಾರ್ಮಿಕರು ತಮ್ಮ ಮುಂದಿನ ಚಿಕಿತ್ಸೆ ಹಾಗೂ ಔಷಧಿಗಳಿಗಾಗಿ ಮೂಡಬಿದಿರೆ (ಮಹಾವೀರ ಕಾಲೇಜು ರಸ್ತೆ) ಬೀಡಿ ಕಾರ್ಮಿಕರ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಔಷಧಾಲಯದ ವೈದ್ಯಕೀಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *