ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ

ಮೂಡುಬಿದಿರೆ: ಶಿಕ್ಷಕರು ಮತ್ತು ಪೋಷಕರು ಮಕ್ಕಳ ಗುರಿನಿರ್ಧಾರದಲ್ಲಿ ಸ್ಪಷ್ಟತೆ ನೀಡಿದರೆ, ಮಕ್ಕಳ ಸಾಧನೆ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಬಲ್ಲದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ನುಡಿದರು.

ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ ವ್ಯವಹಾರ ಆಡಳಿತ ವಿಭಾಗದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ 2025-26ನ್ನು ಉದ್ಘಾಟಿಸಿ ಮಾತನಾಡಿದರು.
ಈಗಿನ ವಿದ್ಯಾರ್ಥಿಗಳು ಉದ್ಯೋಗದ ಸಮಸ್ಯೆ, ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ ಹಲವು ಗೊಂದಲಗಳ ನಡುವೆ ಇದ್ದಾರೆ. 18 ರಿಂದ 21 ವರ್ಷದ ವಿದ್ಯಾರ್ಥಿಗಳು ಸಮಸ್ಯೆ, ಗೊಂದಲಗಳನ್ನು ದಾಟಿ ತಮ್ಮ ಗುರಿಯ ಕಡೆಗೆ ಗಮನ ನೀಡುತ್ತಾರೆಂದರೆ ಅವರನ್ನು ನಾವು ಅಭಿನಂದಿಸಬೇಕು.

ತರಗತಿಗಳು ಪ್ರಪಂಚದಲ್ಲಿ ಅತ್ಯಂತ ಪವಿತ್ರವಾದ ಸ್ಥಳ. ನಾವು ತರಗತಿಯಲ್ಲಿ ಹೇಗೆ ಇದ್ದೆವು, ಏನನ್ನ ಕಲಿತಿದ್ದೇವೆ ಅನ್ನುವುದರ ಮೇಲೆ ನಮ್ಮ ವರ್ತಮಾನ ನಿರ್ಧರಿತವಾಗುತ್ತದೆ.
ನಮ್ಮ ಕಲೆ ಸಂಸ್ಕೃತಿ ಸಂಗೀತಯ ಮಹತ್ವವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣದ ಜೊತೆಗೆ ಉತ್ತಮ ಯೋಚನೆಗಳನ್ನು ಸೃಷ್ಟಿಸುವುದು ಬಹು ಮುಖ್ಯ.
ವ್ಯವಹಾರ ಆಡಳಿತ ವಿಭಾಗದ 75 ವಿದ್ಯಾರ್ಥಿಗಳು ಇನ್ಫೋಸಿಸ್‌ನ ಅಪ್ರೆಂಟಿಸ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್‌ನ ಅಪ್ರೆಂಟಿಸ್‌ಶಿಪ್ ಆಯ್ಕೆಯಾದ ಆಳ್ವಾಸ್ ದೇಶದ ಏಕೈಕ ಸಂಸ್ಥೆ ಆಳ್ವಾಸ್ ಶಿಕ್ಷಣ ಸಂಸ್ಥೆ.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ಮಾತನಾಡಿ ಶಿಕ್ಷಕ-ರಕ್ಷಕ ಸಭೆಯು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶ. ತಮ್ಮ ವಿದ್ಯಾರ್ಥಿಗಳ ಕಲಿಕೆ, ಚಟುವಟಿಕೆಗಳು ಕುರಿತು ಪೋಷಕರು ಶಿಕ್ಷಕರ ಜೊತೆಗೆ ಚರ್ಚಿಸಬೇಕು ಎಂದರು.
ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಸುರೇಖಾ ಮಾತನಾಡಿ ಪೋಷಕರು ಮಕ್ಕಳಿಗೆ ಕಿವಿಯಾಗಬೇಕು. ಮಕ್ಕಳಿಗೆ ಪೋಷಕರ ಬಳಿ ಹೇಳಿಕೊಳ್ಳಬೇಕಾದ ವಿಷಯಗಳು ಹಲವು ಇರುತ್ತವೆ. ನೀವು ಅವರಿಗೆ ಸ್ಪಂದಿಸದೆ ಹೋದಲ್ಲಿ ಅವರು ಆ ವಿಷಯಗಳನ್ನು ಹಂಚಿಕೊಳ್ಳಲು ಬೇರೆಯವರನ್ನ ಹುಡುಕುತ್ತಾರೆ. ಆದರೆ ಆ ವ್ಯಕ್ತಿಗಳು ವಿದ್ಯಾರ್ಥಿಗಳ ಅಭಿವೃದ್ಧಿಗೆ ಅನುಗುಣವಾಗದೆ ಇರಬಹುದು. ಆದರಿಂದ ನಿಮ್ಮ ಮಕ್ಕಳು ಯಾರ ಜೊತೆ ಸ್ನೇಹ ಬೆಳೆಸುತ್ತಾರೆ ಯಾರ ಜೊತೆ ಒಡನಾಟ ನಡೆಸುತ್ತಾರೆ ಎನ್ನುವುದನ್ನು ಇದು ಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಸಭೆಯಲ್ಲಿ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಪ್ರಕಾಶಿನಿ ಪೂಜಾರಿ, ಪ್ರಾದ್ಯಪಕಿ ಪ್ರಜ್ಞಾ ಎಸ್. ಬಿ. ಉಪಸ್ಥಿತರಿದ್ದರು.
ವಚನ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಜಾನ್ವಿ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿನಿ ಶೀತಲ್ ವಂದಿಸಿದರು.

Leave a Reply

Your email address will not be published. Required fields are marked *