ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಶ್ರೀ ಶಾರದ ಕಲಾ ಶಾಲೆಯ ಶಿಷ್ಯೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ನಡೆಸಿದ 2026ನೇ ಸಾಲಿನ ಭರತನಾಟ್ಯ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಮನೀಷಾ ಎಂ.ಎನ್ 72.8% ಅಂಕ ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದಾರೆ.ಬೆಳ್ತಂಗಡಿ ನಿವಾಸಿ ಚೇತನ ಯು.ಎಂ ಹಾಗೂ ನಾರಾಯಣ ಗೌಡ ಇವರ ಪುತ್ರಿಯಾಗಿರುವ ಇವರು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ಪೂಜಿತಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಉರುವಾಲು ನಿವಾಸಿ ಶಾಂತಿ ಪ್ರಿಯ ಹಾಗೂ ರಮಾನಂದ ಇವರ ಪುತ್ರಿಯಾಗಿರುವ ಇವರುಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ಜಸ್ಮಿತಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಳ್ತಂಗಡಿ ನಿವಾಸಿ ಹರಿಣಾಕ್ಷಿ ಹಾಗೂ ಪುರುಷೋತ್ತಮ ಗೌಡ ಎಂ ಇವರ ಪುತ್ರಿಯಾಗಿರುವ ಇವರು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ವರ್ಷ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಬೆಳ್ತಂಗಡಿ ನಿವಾಸಿ ಗಿರಿಜಾ ಹಾಗೂ ಎನ್ ಸುರೇಶ್ ಪರವ ಇವರ ಪುತ್ರಿಯಾಗಿರುವ ಇವರು ಪೆರ್ಲ ಬೈಪಾಡಿ ಶಾಲೆಯ ವಿದ್ಯಾರ್ಥಿಯಾಗಿದ್ದು.

ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಅದಿತಿ ಎನ್ ಉಳಿಯ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಬೆಳ್ತಂಗಡಿ ನಿವಾಸಿ ಯಾದವ ಗೌಡ ಹಾಗೂ ಲವೀನಾ ಎನ್ ಇವರ ಪುತ್ರಿಯಾಗಿರುವ ಇವರು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ಪ್ರಸ್ತುತ ಇವರು ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಇವರ ಶಿಷ್ಯೆಯಾದ ನೃತ್ಯ ಗುರು ವಿದುಷಿ ಡಿಂಪಲ್ ಶಿವರಾಜ್ ಇವರಲ್ಲಿ ಶ್ರೀ ಶಾರದ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *