ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಶಿಸ್ತು, ವಿನಯ, ಸೇವಾಮನೋಭಾವ, ಗುರು-ಹಿರಿಯರನ್ನು ಗೌರವಿಸುವುದು ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ರಂಗಶಿವ ಕಲಾಬಳಗದ ಆಶ್ರಯದಲ್ಲಿ ನಡೆಯುತ್ತಿರುವ ರಂಗಸಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು.
ಉತ್ತಮ ಸಂಸ್ಕಾರವಂತರಾಗಿ, ಹೊಸ ವಿಷಯಗಳನ್ನು ಕಲಿತುಕೊಂಡು, ತಪ್ಪು ಮಾಡಿದಾಗ ತಿದ್ದಿಕೊಂಡು ಮುಂದೆ ಸುಧಾರಣೆ ಮಾಡಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ಅವಿನಾಶ್ ಭಿಡೆ ಮತ್ತು ಸುಲೈಮಾನ್ ವಿಪತ್ತು ನಿರ್ವಹಣೆ ಬಗ್ಯೆ ಮಾಹಿತಿ ನೀಡಿದರು.
ರಂಗಶಿವ ಕಲಾಬಳಗದ ಸುನಿಲ್, ಸಂದೇಶ್, ಜಗದೀಶ್, ರಂಜಿತ್, ಅಭಿಷೇಕ್ ರಾವ್ ಮತ್ತು ಪದ್ಮರೇಖ ಉಪಸ್ಥಿತರಿದ್ದರು.
