ಕೊಂಕಣಿ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಕಾಮತ ಆಯ್ಕೆ

ಮಂಗಳೂರು: ಕೊಂಕಣಿ ಸಾಂಸ್ಕೃತಿಕ ಸಂಘ (ರಿ ) ಮಂಗಳೂರ ಇದರ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಇಂದು (ಮೇ 3) ರಂದು ನಡೆದ ಮಹಾಸಭೆಯಲ್ಲಿ ಆಯಿತು. ಗಾಯತ್ರಿ ಮಂದಿರದ ಸಭಾಗೃಹದಲ್ಲಿ ನಡೆದ ಸಭೆಯಲ್ಲಿ 2026 27ನೇ ಸಾಲಿಗೆ ಅಧ್ಯಕ್ಷ – ಎನ್ ಕೃಷ್ಣ ಕಾಮತ್ ಉಪಾಧ್ಯಕ್ಷ – ಪಿ ಅಶೋಕ್ ಕಾಮತ್, ಕಾರ್ಯದರ್ಶಿ – ಎಂ ಮಂಜುನಾಥ್ ಕಾಮತ್, ಖಜಾಂಚಿ – ಗೀತಾ ಭಟ್, ಜೊತೆ ಕಾರ್ಯದರ್ಶಿ – ಎಸ್ ರಂಜಿತಾ ಆರ್ ಶೆಣೈ, ಸಂಚಾಲಕಿ – ಚಂದ್ರಿಕಾ ಬಾಳಿಗ, ಸಹ ಸಂಚಾಲಕಿ – ಪ್ರತಿಮಾ ನಾಯಕ್, ಸಾಂಸ್ಕೃತಿಕ ಕಾರ್ಯದರ್ಶಿ – ಅರುಣ್ ಪ್ರಕಾಶ್ ನಾಯಕ್, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ – ಪೂರ್ಣಿಮಾ ಕಿಣಿ ಮತ್ತು ಪತ್ರಿಕಾ ಕಾರ್ಯದರ್ಶಿಯಾಗಿ ಸುಮಾ ಪಂಡಿತ್ ಇವರು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಯಂತಿ ಆರ್ ನಾಯಕ್, ಗಾಯತ್ರಿ ಪೈ, ಪದ್ಮಿನಿ ಕಾಮತ್, ವಿನುತಾ ಕಿಣಿ, ಮಾಲತಿ ಹೆಗಡೆ, ಪಿ ದಿನಕರ್ ಕಾಮತ್, ಸುಮಾ ನಾಯಕ್, ಸೌಮ್ಯ ಕಾಮತ್, ಶ್ವೇತಾ ಕಾಮತ್, ವಿಠೋಬ ಶೆಣೈ ಇವರ ನೇಮಕ ಆಯಿತು.

ಸಲಹಾ ಸಮಿತಿಯಲ್ಲಿ ಮಾಜಿ ಅಧ್ಯಕ್ಷರಾದ ವೆಂಕಟೇಶ ಬಾಳಿಗ, ರತ್ನಾಕರ ಕುಡ್ವಾ, ಗೀತಾ ಸೀ ಕಿಣಿ, ಸಂತೋಷ್ ಶೆಣೈ , ಅರುಣ್ ಜಿ ಶೇಟ್, ಪ್ರಭಾ ಭಟ್ ಉಪಸ್ಥಿತರಿರುತ್ತಾರೆ. ನಿಕಟಪೂರ್ವ ಅಧ್ಯಕ್ಷೆ ಪ್ರಭಾ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮಾಜಿ ಅಧ್ಯಕ್ಷ ರತ್ನಾಕರ ಕುಡ್ವ ಚುನಾವಣಾ ಅಧಿಕಾರಿ ಆಗಿದ್ದರು. ನೂತನ ಕಾರ್ಯದರ್ಶಿ ಮಂಜುನಾಥ ಕಾಮತ್ ವಂದಿಸಿದರು. ಸುವರ್ಣಿ ಪಡಿಯಾರ್ ವರದಿ ವಾಚಿಸಿದರು. ಅಶೋಕ ಕಾಮತ್ ಲೆಕ್ಕಪತ್ರ ಮಂಡಿಸಿದರು.

Leave a Reply

Your email address will not be published. Required fields are marked *