ಮಂಗಳೂರು: ಮಹಾನಗರ ಆಟೋ ರಿಕ್ಷಾಚಾಲಕರ 30ನೇ ವಾರ್ಷಿಕೋತ್ಸವದ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ದಿನವೊಂದಕ್ಕೆ 5 ಲೀಟರ್ ಎಲ್.ಪಿ.ಜಿಯನ್ನು ಹಾಕಿ ಬಾಡಿಗೆ ಮಾಡುತ್ತಿರುವ ರಿಕ್ಷಾ ಚಾಲಕರು LPG ದರ ಏರಿಕೆಯಿಂದ 200/-ರೂಪಾಯಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ನಗರದಲ್ಲಿ ಸುಮಾರು 4,000 ಆಟೋ ರಿಕ್ಷಾ ಚಾಲಕರು ದೈನಂದಿನ ಬದುಕಿಗಾಗಿ ಆಟೋ ವಾಲನೆ ಮಾಡಿ ಬಾಡಿಗೆಗಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ದಿನವೊಂದಕ್ಕೆ 200 ರೂಪಾಯಿ ಕಳೆದುಕೊಂಡು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಆಟೋರಿಕ್ಷಾ ಚಾಲಕರ ವಾರ್ಪಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತೈಲಬೆಲೆ ಏರಿಕೆಯಿಂದ ದುಡಿಯುವ ವರ್ಗಗಳಿಗೆ ತೊಂದರೆಯಾಗಿರುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಕಾರ್ಮಿಕ ವರ್ಗಗಳು ಕಷ್ಟ-ನಷ್ಟ ಅನುಭವಿಸಿಕೊಂಡು ಬರುತ್ತಿದ್ದಾರೆ ಈ ಅಸಂಘಟಿತ ಕಾರ್ಮಿಕ ವರ್ಗಗಳಿಗೆ ಸರಕಾರ ಬಲ ತುಂಬಬೇಕಾಗಿದೆ. ಈ ದೃಷ್ಟಿಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 60 ವಯಸ್ಸಿನ ನಂತರ ನಿವೃತ್ತ ವೇತನ ಕನಿಷ್ಠ 3000/- ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಐವನ್ ಡಿʼಸೋಜಾ ತಿಳಿಸಿದರು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಸವಲತ್ತುಗಳನ್ನು ವಿತರಿಸಲಾಯಿತು.
ಸಂಘದ ಸದಸ್ಯರಾದ ಶೇಖರ್ ದೇರಳಕಟ್ಟೆ, ವಸಂತ ಶೆಟ್ಟಿ ವೀರನಗರ, ಅನಿಲ್ ಜೆರಾಲ್ಡ್ ಲೋಬೋ, ಸೀತಾರಾಮ ಶೆಟ್ಟಿ ಹಾಗೂ ವಿಲ್ಫಿ ರವರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
