ಉಜಿರೆ: ಕ್ಯಾಸೆಟ್‌ಗಳ ಅಬ್ಬರ, ಮೈಕಾಸುರನ ಹಾವಳಿಯಿಂದ ಶಬ್ದ ಮಾಲಿನ್ಯವಿಲ್ಲ. ಸಿನೆಮಾ ಹಾಡು, ಬ್ರೇಕ್‌ಡ್ಯಾನ್ಸ್ ಉಪಟಳವಿಲ್ಲ. ಅತ್ಯಂತ ಸರಳವಾಗಿ, ಶಿಸ್ತುಬದ್ಧವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.

ಮದುಮಗ ಕೆ.ಜೆ. ಸುದರ್ಶನ್ ತಾಯಿ-ತಂದೆ ಬಗ್ಯೆ ಅಪಾರ ಗೌರವ, ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸಿ ಅವರೇ ತನಗೆ ಪ್ರತ್ಯಕ್ಷ ದೇವರು ಎಂದು ಗೌರವ ಸಲ್ಲಿಸಿದರು.
ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ಭಾವುಕರಾಗಿ ಆನಂದಭಾಷ್ಪ ಸುರಿಸಿದರು. ಇಂತಹ ಮಗನನ್ನು ಪಡೆದ ತಾವೇ ಭಾಗ್ಯವಂತರು ಎಂದು ಸಂತಸ ವ್ಯಕ್ತಪಡಿಸಿದರು.
ಉಷಾ ಜನಾರ್ಧನ ಗಣೇಶನ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು. ಸೊಸೆಯನ್ನು ಕೂಡಾ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ತಿಳಿಸಿದರು.
ಹಿರಿಯ ದಂಪತಿ ಮತ್ತು ನವದಂಪತಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿ, ಗೌರವಿಸಿದರು. ಎಲ್ಲರಿಗೂ ಸರಳ, ಶುದ್ಧ ಹಾಗೂ ಶುಚಿ-ರುಚಿಯಾದ ಶಾಕಾಹಾರ ಭೋಜನ ನೀಡಿದರು.
ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್ ಪೂಂಜ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ನಾರಾವಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ಆಗಮಿಸಿ ನೂತನ ನವದಂಪತಿಗೆ ಶುಭ ಹಾರೈಸಿದರು.
