ವರದಿ ರಾಯಿ ರಾಜಕುಮಾರ
ಮಂಗಳೂರು ಬಿಜೈಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುಬ್ರಹ್ಮಣ್ಯ ಸಹಕಾರ ಸಂಘದ ಮೂಡುಬಿದಿರೆ ಶಾಖೆಯಲ್ಲಿ ಮೇ 19ರಂದು ಗ್ರಾಹಕದೊಂದಿಗೆ ಒಂದು ದಿನ ಕಾರ್ಯಕ್ರಮ ನಡೆಯಿತು.


ನಾಲ್ಕು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ನಡೆಯಿತು. ಈ ದಿನ ಭಾಗವಹಿಸಿದ ಗ್ರಾಹಕರಿಗೆ ಅದೃಷ್ಟ ಚೀಟಿಯಲ್ಲಿ ಮೂವರನ್ನು ಆರಿಸಲಾಯಿತು. ಆ ಪ್ರಕಾರ ಆಯ್ಕೆಗೊಂಡ ಮೂವರು ಅದೃಷ್ಟ ಗ್ರಾಹಕರು ಹರ್ಷಿತ್, ಸರ್ವೋತ್ತಮ್ ಆಚಾರ್ಯ, ಚಂದ್ರಶೇಖರ್ ರಾವ್ ಬೊಕ್ಕಸ. ಮೂವರಿಗೂ ಆಕರ್ಷಕ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ನಿರ್ವಹಣಾಧಿಕಾರಿ ಸಾಯಿ ಪ್ರಸಾದ್ ಎಂ, ಶಾಖಾ ವ್ಯವಸ್ಥಾಪಕ ಸಂದೀಪ್ ಕುಮಾರ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು.
