ಮಂಗಳೂರು: ಮೇ 22 ರಂದು ವೆನ್‍ಲಾಕ್ ಆಸ್ಪತ್ರೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮೇ 22 ಬೆಳಿಗ್ಗೆ 11.10 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್‍ಘನ ಉಪಸ್ಥಿತಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್‍ ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ: ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಮೊದಲನೇ ಹಂತದ ನೂತನ ಹೊರರೋಗಿ ವಿಭಾಗದ ಕಾಮಗಾರಿ (ಅಂದಾಜು ಮೊತ್ತ ರೂ. 35 ಕೋಟಿ ಸರ್ಕಾರದ ಅನುದಾನ), ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 500 ಕೆ.ಎಲ್.ಡಿ ಸಾಮಥ್ರ್ಯದ ಎಸ್.ಟಿ.ಪಿ ಘಟಕ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ ರೂ. 2 ಕೋಟಿ – ಸರ್ಕಾರದ ಅನುದಾನ), ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ 4ನೇ ಮಹಡಿ ಹಾಗೂ 5ನೇ ಮಹಡಿ ಕಾಮಗಾರಿ (ಎಂ.ಆರ್.ಪಿ.ಎಲ್ ಮಂಗಳೂರು ಸಿ.ಎಸ್.ಆರ್ ನಿಧಿಯಿಂದ ಅಂದಾಜು ಮೊತ್ತ ರೂ. 10 ಕೋಟಿ).

Leave a Reply

Your email address will not be published. Required fields are marked *