ಮೂಡುಬಿದಿರೆ: ಕೊಂಕಣಿ ಜನಪದ ಪ್ರಕಾರದಲ್ಲಿ ಮಹತ್ವದ ಸಂಗೀತ ಸಾಧನವಾದ ಗುಮಟೆ ವಾದನ ಮತ್ತು ಗುಮಟೆ ಹಾಡುಗಳನ್ನು ಹಾಡಲು ಕಲಿಸುವ ಕಾರ್ಯಾಗಾರವು ಮೇ 25 ರಂದು ಮಾಂಡ್ ಸೊಭಾಣ್ ಮತ್ತು ರಂಗ್ ತರಂಗ್, ಮೂಡುಬಿದ್ರೆ ಇವರ ಜಂಟಿ ಆಶ್ರಯದಲ್ಲಿ ಗಂಟಾಲ್ಕಟ್ಟೆ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ವಂ. ಧರ್ಮಗುರು ರೊನಾಲ್ಡ್ ಡಿಸೋಜ ದೀಪ ಬೆಳಗಿಸಿ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಕಾರ್ಯಕ್ರಮದ ಸಂಚಾಲಕ ಅರುಣ್ ಪಿರೇರಾ ಹಾಗೂ ಸುನೀಲ್ ಮಿರಾಂದಾ ಮತ್ತು ಆಲ್ವಿನ್ ಮಿನೇಜಸ್ ಉಪಸ್ಥಿತರಿದ್ದರು.
ನಂತರ ಜನಪದ ತಜ್ಞ, ಸಂಗೀತ ಗುರು ಜೊಯೆಲ್ ಪಿರೇರಾ ಇವರು ಗುಮಟೆ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಉಪನ್ಯಾಸ ನೀಡಿದರು. ನಂತರ ಹಾಡುಗಳ ದನಿ, ವಾದನದ ಲಯ ಇತ್ಯಾದಿ ಕಲಿಸಲಾಯಿತು. ಡೆಲ್ಟನ್ ಲೋಬೊ, ನಿಕೋಲ್ ಮೊರಾಸ್ ಮತ್ತು ಆನ್ಸಿಲ್ಲಾ ಸಿಕ್ವೇರಾ ಇವರುಗಳು ತರಬೇತಿಯಲ್ಲಿ ಸಹಕರಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಸಹ ಸಂಚಾಲಕಿ ಲೀಜಾ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
