ಉರ್ವ: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ

ಉರ್ವ, ಜೂನ್ 1: ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ತಮ್ಮ
ಗುರಿಗಳನ್ನು ಸಾಧಿಸಲಿ ಎಂದು ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವದ ಸಂಚಾಲಕ ಮತ್ತು ಉರ್ವ ಇಮ್ಯಾಕ್ಯುಲೇಟ್ ಚರ್ಚ್ ಇದರ ಧರ್ಮಗುರು ವಂ| ಬೆಂಜಮಿನ್ ಪಿಂಟೊ ಹೇಳಿದರು.

ಇಂದಿನ ಸಣ್ಣ ಪ್ರಯತ್ನಗಳು ನಾಳಿನ ದೊಡ್ಡ ಯಶಸ್ವಿಗೆ ಅಡಿಪಾಯವಾಗುತ್ತದೆ ಎನ್ನುತ್ತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಸೇವೆ ಅಮೂಲ್ಯವಾದದು ಎಂದು ಶಾಲಾ ಮುಖ್ಯ ಶಿಕ್ಷಕ ಅಲೋಶಿಯಸ್‌ ಡಿ’ಸೋಜಾ ಸ್ವಾಗತಿಸಿ ಸಾಂಕೇತಿಕವಾಗಿ 6 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿ ಶಾಲಾ ಅಸೆಂಬ್ಲಿಯನ್ನು ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಲವೀನ ಡಿ’ಕುನ್ಹಾ, ಶಾಲಾ ನಾಯಕ ಹರ್ಷವರ್ಧನ್, ಉಪನಾಯಕಿ ಜೇನ್ ಪಿಂಟೋ, ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿ ಶಾಲಾ ಅಸೆಂಬ್ಲಿಯನ್ನು ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಲವೀನ ಡಿ’ಕುನ್ಹಾ , ಶಿಕ್ಷಕಿ ಪ್ರಮೀಳಾ, ಶಾಲಾ ನಾಯಕ ಹರ್ಷವರ್ಧನ್, ಉಪನಾಯಕಿ ಜೇನ್ ಪಿಂಟೋ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *