ವಿಟ್ಲ : ರಸ್ತೆ ಕಾಮಗಾರಿ- ಸಂಚಾರ ಮಾರ್ಗ ಬದಲಾವಣೆ

ಮಂಗಳೂರು, ಜೂ.08:- ಪುತ್ತೂರು ವಿಧಾನಸಭಾ ಕ್ಷೇತ್ರದ ಕಡೂರು ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಬೊಬ್ಬೆಕೇರಿ ಎಂಬಲ್ಲಿ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ಜೂನ್ 5 ರಿಂದ 3 ತಿಂಗಳವರೆಗೆ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಸಾರಡ್ಕ, ವಿಟ್ಲ ಕಡೆಯಿಂದ ಮಂಗಳಪದವು ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು (ಬಸ್ಸುಗಳು ಸೇರಿ) ಮಾತ್ರವೇ ವಿಟ್ಲ ನಾಲ್ಕು ಮಾರ್ಗದ ಬಳಿ ಇರುವ ಬದ್ರಿಯಾ ಟೆಕ್ಸ್‍ಟೈಲ್ ಬಳಿ ರಸ್ತೆಯಿಂದ ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ, ಸುರಕ್ಷಾ ಆಸ್ಪತ್ರೆಯ ಮೂಲಕ ಬೊಬ್ಬೆಕೇರಿಗೆ ಸಂಚರಿಸಬೇಕು. ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಆಗಮಿಸುವ ಎಲ್ಲಾ ವಾಹನಗಳಿಗೆ ಹಾಲಿ ರಸ್ತೆಯಲ್ಲೇ ಏಕಮುಖವಾಗಿ ಸಂಚರಿಸಬೇಕು. ನಾಲ್ಕು ಮಾರ್ಗ ಜಂಕ್ಷನ್‍ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ರಸ್ತೆಯಲ್ಲಿ ಭಾರಿ ಘನವಾಹನಗಳ (10 ಚಕ್ರದ ಮೇಲ್ಪಟ್ಟ) ಸಂಚಾರವನ್ನು ನಿಷೇಧಿಸಲಾಗಿದೆ. ಹಾಗೂ ಈ ಭಾರಿ ಘನವಾಹನಗಳು ಕಬಕ ರಸ್ತೆಯ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *