ಪ್ರಕೃತಿಯ ಮಡಿಲಲ್ಲಿ ಅಡಗಿದೆ ಅನೇಕ ಅರ್ಥ  – Article by Anjali Srinivas

ಸಮುದ್ರದ ಅಲೆಗಳ ಮುಂದೆ ಕುಳಿತುಕೊಳ್ಳುವುದು ಪ್ರಕೃತಿಯ ಅತಿದೊಡ್ಡ ಅದ್ಭುತಗಳಲ್ಲಿ ಒಂದನ್ನು ಅನುಭವಿಸುವಂತಿದೆ. ಈ ಕ್ಷಣವು ಮನಸ್ಸಿಗೆ ಶಾಂತಿ, ಆಲೋಚನೆಗಳಿಗೆ ಆಳ ಮತ್ತು ಜೀವನದ ಸಣ್ಣತನದ ಅರಿವನ್ನು ನೀಡುತ್ತದೆ. ಸಮುದ್ರದ ಘರ್ಜಿಸುವ ಅಲೆಗಳು ಬಂಡೆಗಳಿಗೆ ಅಪ್ಪಳಿಸಿದಾಗ, ಅದು ಪ್ರಕೃತಿಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅಲೆಗಳು ದಡಕ್ಕೆ ಬಂದು ಪಾದಗಳನ್ನು ತೊಳೆಯುವಾಗ, ಅದು ಒಂದು ರೀತಿಯ ಪ್ರಶಾಂತತೆಯನ್ನು ನೀಡುತ್ತದೆ. ಅಲೆಗಳ ಸೌಜನ್ಯತೆ ಕಾಣಬಹುದು ನಿರಂತರವಾಗಿ ಬಂದು ಹೋಗುವ ಅಲೆಗಳನ್ನು ನೋಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು. ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ ಸಮುದ್ರ ತೀರದಲ್ಲಿ ನಿಂತಲ್ಲೆ ನಿಂತರೆ ನಿಧಾನವಾಗಿ ಕುಸಿಯುತ್ತ ಹೋಗುತ್ತೇವೆ ಪ್ರಕೃತಿ ನಮಗೆ ಸಂದೇಶ ನೀಡುತ್ತದೆ ನಿಂತಲ್ಲೇ ನಿಲ್ಲದಿರು ಎಂದು ಸಮಯ ಪ್ರಜ್ಞೆ ತಿಳಿಸುವುದು  ಮೌನವಾಗಿ ಹರಿಯುವ ನದಿಯಲ್ಲೂ ಅದೆಷ್ಟು ಅರ್ಥಗಳು ಹೊತ್ತು ಸಾಗುತ್ತಿವೆ.

ಈ ಗಾಳಿ ಬೆಳಕು ಜಲ ನೆಲ ಗಿಡ ಮರ ಮನುಕುಲಕ್ಕೆ ಅನೇಕ ಜೀವಿಗಳಿಗೆ ಆಶ್ರಯ ನೀಡಿ ಅದೆಷ್ಟು ಮೌನವಾಗಿದೆ. ಪ್ರಕೃತಿಗಿಲ್ಲದ ಭೇದ ಭಾವ ಮನುಷ್ಯನಲ್ಲಿ ಏಕಿದೆ? ಎಲ್ಲವು ನಾನು ನನ್ನಿಂದ ಎನ್ನೋ ಭಾವ ಏತಕೆ?

ಭೂಮಿಯೂ ಒಡಲಲ್ಲಿ ಜ್ವಾಲಾಮುಖಿ ಇಟ್ಟುಕೊಂಡು  ಮೇಲೆ ತಂಪು ಕಂಪು ಕೊಡುವಳು ಮನುಷ್ಯನೇಕೆ ಹೊಟ್ಟೆಕಿಚ್ಚಿನಿಂದ ತಾನಲ್ಲದೆ ತನ್ನವರನ್ನೆಲ್ಲ ಸುಡುವನು.

ಮನುಷ್ಯನ ಸ್ವಾರ್ಥಕ್ಕೆ ಮಿತಿ ಎನ್ನುವುದೇ ಇಲ್ಲವೇ.. ಪ್ರಕೃತಿಯೊಂದಿಗೆ ಸಮಯ ಕಳೆದಾಗ ಮನುಷ್ಯ ಪ್ರಕೃತಿಯ ವ್ಯತ್ಯಾಸ ತಿಳಿಯುತ್ತದೆ. ಮನುಷ್ಯ ಯಾರಿಗಾದರೂ ಒಂದು ಸಾರಿ ಆಶ್ರಯ ಊಟ ನೀರು ಕೊಟ್ಟರೆ ನಾವು ನೀಡಿರುವ ಭಿಕ್ಷೆ ಎಂದು ಬಿಗುತ್ತಾರೆ ಸಾಯೋವರೆಗೂ ನಮಗೆ ಋಣಿಯಾಗಿರಬೇಕೆಂದು ಬಯಸುತ್ತಾರೆ. ಅದೇ ಈ ಪ್ರಕೃತಿ ಯಾವುದೇ ಭೇದ ಭಾವವಿಲ್ಲದೆ ನಮಗೆ ನೆಲ ಜಲ ಗಾಳಿ ಆಹಾರ ನೀಡಿದ ಈ ಪ್ರಕೃತಿಯ ಮಹಾನತೆಯ ಉಸಿರಿರುವ ತನಕ ಋಣಿಯಾಗಿರ್ಬೇಕು 

ಈ ಪ್ರಕೃತಿಯ ಜೊತೆ ಒಡನಾಟ ಬೆಳೆದಾಗ ಮನುಷ್ಯ ಬೇಕೇನುಸುವುದಿಲ್ಲ. ಯಾವತ್ತಾದರೂ ಪ್ರಕೃತಿ ಜೊತೆ ಸಮಯ ಕಳೆದಾಗ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ  ಬಹು ದೂರ ಬಂದು ಬಿಟ್ಟಿದ್ದೆವೆ ಎನಿಸುತ್ತದೆ. ಪ್ರಕೃತಿಯ ಮಡಿಲಲ್ಲಿ ಇದ್ದು ಅಪರಿಚಿತರಂತೆ ಇದ್ದು ಬಿಟ್ಟೇವಾ ಸ್ವಾರ್ಥಿಗಳ ಜೊತೆ ಬೆರೆತು ನಿಸ್ವಾರ್ಥತೆ  ಮರೆತು ಹೋದೇವಾ? …  ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವುದಿರಲಿ ಪ್ರಕೃತಿಯ ಮಹತ್ವತೆ ಕೂಡ  ತಿಳಿಯದೆ ತಪ್ಪು ಮಾಡ್ತಿದ್ದೇವೆ ಸಮಯ ಇದ್ದಾಗಲೇ ಪ್ರಕೃತಿಯ ಮಹತ್ವ ಅರಿಯೋಣ. 

✍️ಅಂಜಲಿ ಶ್ರೀನಿವಾಸ್ 

Leave a Reply

Your email address will not be published. Required fields are marked *