ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗದ ಮುಚ್ಚುವಿಕೆ ತೀವ್ರ ಖಂಡನೀಯ -ಅ.ಭಾ.ಸಾ.ಪ.

ವರದಿ ರಾಯಿ ರಾಜಕುಮಾರ್
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಾರಿ ಬೆಳವಣಿಗೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಳವಳ ವ್ಯಕ್ತಪಡಿಸಿದೆ.

ಕರಾವಳಿ ಹಾಗೂ ಮಲೆನಾಡು ಭಾಗದ ಉನ್ನತ ಶಿಕ್ಷಣದ ಅತ್ಯಂತ ಪ್ರಮುಖ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾಲಯವು ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳಿಂದ ಶೈಕ್ಷಣಿಕ ವಾತಾವರಣ ಕುಸಿತ ಕೊಳಗಾಗಿದೆ. ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುಳು, ಕೊಂಕಣಿ, ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿ ಪ್ರವೇಶ ಸಂಖ್ಯೆ ಕಡಿಮೆಯಾಗಲು ಮುಖ್ಯವಾಗಿ ಕಾರಣ ಹೆಚ್ಚಿಸಿದ ಶುಲ್ಕ. ಇದನ್ನೇ ನೆಪವಾಗಿಟ್ಟುಕೊಂಡು ವಿಭಾಗಗಳನ್ನು ಮುಚ್ಚಿರುವುದು ಖಂಡನೀಯ. ನಗರ ಮಧ್ಯಭಾಗದಲ್ಲಿದ್ದ ಈ ವಿಭಾಗಗಳನ್ನು ಸುಮಾರು 20 ಕಿಲೋಮೀಟರ್ ದೂರದ ವಿಶ್ವವಿದ್ಯಾನಿಲಯ ಆವರಣಕ್ಕೆ ಸ್ಥಳಾಂತರಿಸಿರುವುದು ಆಸಕ್ತ ವಿದ್ಯಾರ್ಥಿಗಳಿಗೆ ಅತ್ಯಂತ ನೋವುಂಟು ಮಾಡಿದೆ.

ಒಡೆಯುವುದು ಗುರುದೇವ ದತ್ತ ಸಂಸ್ಥಾನವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತುಳು ಅಧ್ಯಯನ ಕೇಂದ್ರವನ್ನೇ ತೆರೆದರು ಕೂಡ ತುಳು ಸೇವೆಯನ್ನು ಮುಚ್ಚಲಾಗಿದೆ. ಹಿಂದಿ ವಿಭಾಗದ ಸಹಕಾರದಿಂದ ಹಲವರು ಪದವಿ, ಪಿ ಎಚ್ ಡಿ ಇತ್ಯಾದಿ ಪಡೆದು ಸೇವೆ ಸಲ್ಲಿಸುತ್ತಿದ್ದು ಅದನ್ನು ಸಹ ಮುಚ್ಚಿರುವುದು ಅತ್ಯಂತ ದೊಡ್ಡ ಅಮಾನವೀಯ ಕ್ರಮವಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು, ಕೊಂಕಣಿ, ಹಿಂದಿ ಭಾಷೆಗಳಿಗೆ ಅಧ್ಯಯನ, ಸಂಶೋಧನೆ, ಅಭಿವೃದ್ಧಿಗೆ ಉತ್ತೇಜನ ಇಲ್ಲವೆಂದಾಗಲ್ಲಿ ಬೇರೆ ಎಲ್ಲಿ ದೊರಕಲು ಸಾಧ್ಯ??? ಆದುದರಿಂದ ಸರಕಾರ ತಕ್ಷಣ ಶೈಕ್ಷಣಿಕ ಅವ್ಯವಸ್ಥೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತನಿಖೆ ನಡೆಸಿ ಮುಚ್ಚಲ್ಪಟ್ಟಿರುವ ಭಾರತೀಯ ಭಾಷೆಗಳ ವಿಭಾಗಗಳನ್ನು ಪುನರಪಿ ಆರಂಭಿಸಲು, ವಿದ್ಯಾರ್ಥಿ ಸ್ನೇಹ ನೀತಿಗಳನ್ನು ಜಾರಿಗೆ ತರಲು, ಭಾರತೀಯ ಭಾಷೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮತ್ತು ಶೈಕ್ಷಣಿಕ ಘನತೆಯನ್ನು ಪುನಃ ಸ್ಥಾಪಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲರನ್ನು ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲತೇಶ್ ಬಾಕ್ರಬೈಲು, ಡಾ. ಸುರೇಶ್ ನೆಗಳಗುಳಿ, ಶಿವರಾಮ ಶೆಟ್ಟಿ ಹಾಗೂ ಗೀತಾ ಲಕ್ಷ್ಮೇಶ್ ಹಾಜರಿದ್ದರು.
.

Leave a Reply

Your email address will not be published. Required fields are marked *