ಮಂಗಳೂರು: ಪೆಟ್ರೋಲ್-ಡಿಸೇಲ್ ದರವನ್ನು ಪ್ರತೀ ಲೀಟರ್ ಗೆ ಮೂರು ರೂಪಾಯಿಯಂತೆ ಹೆಚ್ಚಿಸುವ ಮೂಲಕ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ದರವನ್ನು 997/- ಮಾಡುವ ಮೂಲಕ ಜನರಿಗೆ ನಿಜವಾದ ಅಚ್ಚೇದಿನವನ್ನು ತೋರಿಸಿಕೊಟ್ಟ ಬಿಜೆಪಿ ಭಕ್ತರಿಗೆ ಇಂದು ಕಣ್ಣು ತರೆಸುವ ನಿಜವಾದ ಸಂದರ್ಭ ಬಿಜೆಪಿ ಅಡಳಿತ ಬಂದ ಮೇಲೆ ದೇಶದಲ್ಲಿ ಪೆಟ್ರೋಲ್ ಡಿಸೇಲ್ ದರವನ್ನು ಏರಿಕೆ ಮಾಡುವ ಮೂಲಕ ಹಣದುಬ್ಬರವನ್ನು ಸಾಮಾನ್ಯ ಜನರಿಗೆ ಇವತ್ತು ಬೆಲೆ ಏರಿಕೆಯ ರುಚಿಯನ್ನು ತೋರಿಸಿದ್ದಾರೆ.

ಪೆಟ್ರೋಲ್ ಡಿಸೇಲ್ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ದಿನನಿತ್ಯದ ವಸ್ತುಗಳ ದರ ಏರಿಕೆಯಾಗಿರುವುದು ಮಾತ್ರವಲ್ಲದೇ ಜನರ ಜೀವನವನ್ನೇ ಸಂಕಷ್ಟಕ್ಕೀಡು ಮಾಡಿದೆ. . ಬಡವರ ಮೇಲೆ, ರೈತರ ಮೇಲೆ, ಕಾರ್ಮಿಕರ ಮೇಲೆ ನಡೆಸಿದ ಲಾಠಿ ಪ್ರಹಾರ ಇದು ಎಂದು ಐವನ್ ಡಿʼಸೋಜಾ ಬಣ್ಣಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಅಚ್ಚೇದಿನ್ ಬರುತ್ತದೆ ಎಂದು ಹೇಳಿ ಅನೇಕ ಜನರನ್ನು ವಂಚಿಸಿದ ನರೇಂದ್ರ ಮೋದಿ ಕೇಂದ್ರ ಸರಕಾರ ಇವತ್ತು ಪೆಟ್ರೋಲ್ ಡಿಸೇಲ್ ಗ್ಯಾಸ್ ದರವನ್ನು ಏರಿಸುವ ಮೂಲಕ ರಾಷ್ಟ್ರಾದಾದ್ಯಂತ ಹಣಕ್ಕೆ ಬೆಲೆಯೇ ಇಲ್ಲದಂತೆ ಮಾಡಿರುವುದು, ಕೇಂದ್ರ ದಲ್ಲಿ ಅಧಿಕಾದಲ್ಲಿರುವುದು ದುರಾದೃಷ್ಟಕರ. ಪ್ರತಿಯೊಂದು ಮಾತಿನುದ್ದಕ್ಕೂ ಸಾಮಾನ್ಯ ಜನರ ಹಿತ ಕಾಪಾಡಿಕೊಂಡು ಬರುತ್ತಿರುವುದೆಂದು ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಇವತ್ತು ಜನರು ಬೆಲೆ ಏರಿಕೆ ಮಾಡಿದರಿಂದ ತತ್ತರಿಸಿ ಹೋಗಿದ್ದಾರೆ. ಇದನ್ನು ಕೂಡಲೇ ಇಳಿಕೆ ಮಾಡದೇ ಇದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.
ವಿಶ್ವಗುರು ಎಂಬ ಕೀರೀಟವನ್ನು ನರೇಂದ್ರಮೋದಿಯವರು ವಿಶ್ವದಲ್ಲಿಯೇ ದುಬಾರಿ ಡಿಸೇಲ್-ಪೆಟ್ರೋಲ್ ಎಲ್.ಪಿ.ಜಿ. ದರ ಏರಿಸುವ ಮೂಲಕ ಭಾರತ ದೇಶಕ್ಕೆ ನರಕದ ಗುರುವಾಗಿ ಮಾರ್ಪಟ್ಟಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ. ಹಾಗಾಗಿ ದೇಶದ ಅರ್ಥಿಕ ಪರಿಸ್ಥಿತಿಯನ್ನು ಮತ್ತು ಜನಸಾಮಾನ್ಯರನ್ನು ಬದುಕಿನಲ್ಲಿ ತೊಂದರೆಯನ್ನು ಉಂಟು ಮಾಡಿದ ಬಿಜೆಪಿ ಸರಕಾರ ಜನರ ಕ್ಷಮೆಯಾಚನೆ ಮಾಡಬೇಕು ಮತ್ತು ಅಚ್ಚೇದಿನ್ ಎಂಬ ಶಬ್ದವು ಹಳೆದಿನಗಳನ್ನು ನೆನಪು ಮಾಡಿದೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.
