ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಹಾಗೂ ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಜೈನ ಮಠ ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆ ಪದವಿ ಪೂರ್ವ ವಿಧ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟವು ಮೂಡುಬಿದಿರೆ ಸ್ವರಾಜ್ ಮೈದಾನದ ಕ್ರೀಡಾಂಗಣದಲ್ಲಿ ನಡೆಯಿತು. ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ. ಸ್ವಸ್ತಿಶ್ರೀ ಚಾರುಕೀರ‍್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀ ಜೈನಮಠ ಮೂಡುಬಿದಿರೆ ಇವರು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಾದ ನೀಡಿದರು.



ಅಧ್ಯಕ್ಷತೆಯನ್ನು ವಹಿಸಿಕೊಂಡ ಪೂಜ್ಯ ಸ್ವಾಮೀಜಿಯವರು ಮಾತನಾಡುತ್ತಾ ಕ್ರೀಡೆ ಎಂಬುದು ಮಕ್ಕಳಲ್ಲಿ ಸ್ಫೂರ್ತಿ ಮತ್ತು ಚೈತನ್ಯವನ್ನು ತುಂಬಬೇಕು ಕ್ರೀಡೆ ವಿಧ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕಾರಿ ಎಂದರು. ಕಾರ‍್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಯಂ ಬಾಹುಬಲಿ ಪ್ರಸಾದ್ ಇವರು ಮಾತನಾಡುತ್ತಾ ಕ್ರೀಡೆ ನಮ್ಮ ದೇಶದಲ್ಲಿ ಎಷ್ಟು ಮಹತ್ವವನ್ನು ಪಡೆದುಕೊಂಡಿದೆ, ಎಷ್ಟು ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶ್ವೇತಾ ವಕೀಲರು, ನೋಠರಿ ಹಾಗೂ ಸ್ವಸ್ತಿಶ್ರೀ ಕಾಲೇಜು ಸಾಚಾಲಕರು ನಮ್ಮ ಹೆಮ್ಮೆಯ ಭಾರತದ ರಾಷ್ಟ್ರೀಯ ಕ್ರೀಡಾಪಟುಗಳ ಆದರ್ಶ ಸಾಧನೆಯನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಮೂಡಿಸಿಕೊಂಡು ವಿದ್ಯೆ ಜೊತೆಗೆ ಕ್ರೀಡೆಯನ್ನು ಕೂಡ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು. ಮೂಡಬಿದಿರೆ ತಾಲೂಕು ವಿವಿಧ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪನ್ಯಾಸಕರು ಹಾಗೂ ವಿಧ್ಯಾರ್ಥಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂಡಬಿದ್ರೆ ತಾಲೂಕು ಪದವಿಪೂರ್ವ ಕಾಲೇಜುಗಳ ಕ್ರೀಡಾ ಸಂಚಾಲಕರಾದ ನವೀನ್ ಹೆಗ್ಡೆ, ಆಳ್ವಾಸ್ ನ ನವೀನ್, ತರಬೇತಿದಾರ ಶ್ರೀ ಗೌಡ, ಅನಂತರಾಜ್ ದೈಹಿಕ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ‍್ಯಕ್ರಮವನ್ನು ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕಿ ಸರಸ್ವತಿ ನಿರೂಪಿಸಿದರು. ಸೌಮ್ಯ ಶ್ರೀ ಸ್ವಾಗತಿಸಿದರು. ಸುಷ್ಮಾ ಧನ್ಯವಾದವಿತ್ತರು.
