ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳನ್ನು ಭೇಟಿ ಮಾಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಮೂಡುಬಿದಿರೆ: ಹಿರಿಯ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಾವಿರ ಕಂಬ ಬಸದಿ ಹಾಗೂ ಶ್ರೀ ಜೈನ ಮಠಗೆ ಭೇಟಿ ನೀಡಿ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಅವರು 15ನೇ ಶತಮಾನದಲ್ಲಿ ವಿದೇಶಿ ಆಕ್ರಮಣಗಳನ್ನು ದಿಟ್ಟತನದಿಂದ ಎದುರಿಸಿ “ಕರಿಮೆಣಸಿನ ರಾಣಿ” ಎಂದೇ ಖ್ಯಾತರಾಗಿದ್ದ ಚೆನ್ನಭೈರಾದೇವಿ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿರುವುದಾಗಿ ತಿಳಿಸಿದರು. ರಾಷ್ಟ್ರಪ್ರೇಮ ಹಾಗೂ ಇತಿಹಾಸದ ಅರಿವು ಮೂಡಿಸುವ ಉದ್ದೇಶದಿಂದ ಚೆನ್ನಭೈರಾದೇವಿಯ ಕುರಿತು ಐತಿಹಾಸಿಕ ಚಲನಚಿತ್ರವನ್ನು ನಿರ್ದೇಶಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಭಟ್ಟಾರಕ ಶ್ರೀಗಳು ರಾಜೇಂದ್ರ ಸಿಂಗ್ ಬಾಬು ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಲೋಕರಾಜ್, ಕಲಾವಿದ ಚಿತ್ತ ಜಿನೇಂದ್ರ, ವಕೀಲೆ ಶ್ವೇತಾ ಜೈನ್ ಹಾಗೂ ಸಹಾಯಕ ಪ್ರವೀಣ್ ಬೆಂಗಳೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *