ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ – ರಾಯಿ ರಾಜಕುಮಾರ್

ಪರಿಸರಕ್ಕೆ ಹಾನಿಯಾಗದಂತೆ ನಾವು ಬದುಕಬೇಕು. ಮನುಷ್ಯ ಎಸೆಯುವ ಪ್ಲಾಸ್ಟಿಕ್ ನ ಅಂಶ ಇಂದು ನಮ್ಮ ಸೇವನೀಯ ಪದಾರ್ಥಗಳಲ್ಲಿ ಅಡಗಿದ್ದು ಪ್ರತಿಯೊಬ್ಬರಿಗೂ ಮಾರಕವಾಗಿದೆ. ಆದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಶುದ್ಧ, ಸ್ವಚ್ಛ ಪರಿಸರ ಇರುವ ಗ್ರಾಮೀಣ ಪ್ರದೇಶಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ, ಪತ್ರಕರ್ತ, ತರಬೇತುದಾರ ರಾಯಿ ರಾಜ ಕುಮಾರ್ ನುಡಿದರು.
ಅವರು ಜುಲೈ 22ರಂದು ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿಗೋಳಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ವಿವಿಧ ಹಕ್ಕುಗಳ ಮಾಹಿತಿ ಕಾರ್ಯಕ್ರಮ ನಡೆಸಿದರು. ಹಕ್ಕುಗಳನ್ನು ಬಹಳ ಯುಕ್ತ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಜಾರಿಗೆ ತರಬೇಕು. ಅದಕ್ಕಾಗಿ ಹಲವಾರು ಸಹಾಯವಾಣಿಗಳಿವೆ ಎಂದು ಅವುಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕಿ ಸುಮಿತ್ರಾ ಅಧ್ಯಕ್ಷತೆ ವಹಿಸಿದ್ದರು. ಸುಚಿತ್ರಾ ಸ್ವಾಗತಿಸಿದರು. ಮೆಟಿಲ್ಡಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ಸಿಲ್ವಿಯಾ ಮಿರಾಂದ ವಂದಿಸಿದರು.

Leave a Reply

Your email address will not be published. Required fields are marked *