ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮುಂಭಾಗದಲ್ಲಿ ಹೇಮಂತ್‍ ಚಮಗಾರರಿಗೆ ಸೇರಿದ ಮನೆಗೆ ಬೆಂಕಿ ಅವಘಡ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮುಂಭಾಗದಲ್ಲಿ ಹೇಮಂತ್‍ ಚಮಗಾರರಿಗೆ ಸೇರಿದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದನ್ನು ಶಕ್ತಿ ವಿದ್ಯಾಸಂಸ್ಥೆಯ ಸಿಬ್ಬಂಧಿಗಳು ನೋಡಿ ತಕ್ಷಣ ಬೆಂಕಿ ನಂದಿಸಲು ಶಕ್ತಿ ವಿದ್ಯಾ ಸಂಸ್ಥೆಯ ಪೈಯರ್‍ಜೆಟ್ಟನ್ನು ಬಳಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಕಾರ್ಯ ಪ್ರವೃತ್ತರಾದರು.

ಮನೆಯಲ್ಲಿ ಯಾರೂ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಈ ಅವಘಡವು ಸಂಭವಿಸಿತ್ತು. ಶಾಲೆಯ ಸುಮಾರು 50ಕ್ಕೂ ಹೆಚ್ಚಿನ ಸಿಬ್ಬಂಧಿ ವರ್ಗದವರು ಈ ಕಾರ್ಯದಲ್ಲಿ ತೊಡಗಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಡಾ ಕೆ.ಸಿ ನಾೈಕ್‍ ರವರು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸಿಬ್ಬಂದಿ ವರ್ಗದವರಿಗೆ ಮಾರ್ಗದರ್ಶನವನ್ನು ಮಾಡಿರುತ್ತಾರೆ. ಈ ಕಾರ್ಯಕ್ಕೆ ಶಕ್ತಿನಗರದ ನಿವಾಸಿಗಳು ಶ್ಲಾಘನೆಯನ್ನು ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *