‘ಸೌಜನ್ಯ ಮಹಿಳಾ ಮಂಡಲ’ದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಮಂಗಳೂರು: ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಜೂನ್ 24 ರಂದು ಬೈಕಾಡಿ ಮನೆ “ಮಂಜೂಷಾ”ದಲ್ಲಿ ಸೌಜನ್ಯ ಮಹಿಳಾ ಮಂಡಲ (ರಿ.)ಹೊಯ್ಗೆಬೈಲ್ ಉರ್ವ ಮಂಗಳೂರು ಇವರಿಂದ “ಮಹಿಳೆಯರ ಆರೋಗ್ಯ ಮಾಹಿತಿ” ಕಾರ್ಯಕ್ರಮ ನಡೆಯಿತು.

ಆಯುರ್ವೇದ ತಜ್ಞೆ ಡಾ. ಪ್ರತಿಭಾ ರೈ ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳೆಯರಿಗೆ ಮನನ ವಾಗುವಂತೆ ಆರೋಗ್ಯ ಮಾಹಿತಿ ನೀಡುತ್ತಾ “ಭಾವುಕ ಮನೋಭಾವನೆಯ ಕಾರಣಗಳಿಂದಾಗಿ ನಮ್ಮ ದೇಹ-ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆಹಾರ, ನಿದ್ದೆ,ವ್ಯಾಯಾಮ ಇವುಗಳ ಮೂಲಕ ನಮ್ಮ ದೇಹದ ಕಡೆಗೂ ಗಮನ ನೀಡಬೇಕು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದರು. ಮಾಹಿತಿ ನೀಡಿದ ನಂತರ ಸಭಿಕರ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಪ್ರತಿಭಾ ರೈ ಯವರನ್ನು ಸನ್ಮಾನಿಸಲಾಯಿತು.

ಮಂಡಳಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಗೌರವಾಧ್ಯಕ್ಷೆ ಕೆ.ಎ.ರೋಣಿಯವರು ಪ್ರಸ್ತಾವಿಕ ಮಾತುಗಳನ್ನಾಡಿ, ಉಪಾಧ್ಯಕ್ಷೆ ರತ್ನಾವತಿ ಜೆ.ಬೈಕಾಡಿ ಅತಿಥಿ ಪರಿಚಯ ಮಾಡಿ  ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ರಾಜೇಶ್ವರಿ  ವಂದಿಸಿದರು.

Leave a Reply

Your email address will not be published. Required fields are marked *