ಮ್ಯಾಕೋ-ಕೋ ಅಪರೇಟಿವ್‌ ಸೊಸೈಟಿ ವತಿಯಿಂದ ವೈದ್ಯಕೀಯ ತಪಾಸಣಾ – ಶಿಬಿರ ಐವನ್‌ ಡಿʼಸೋಜಾ

ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ  ಮ್ಯಾಕೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಬಲ್ಮಠ, ಮಂಗಳೂರು ಇದರ ಅಧ್ಯಕ್ಷರಾದ ಐವನ್ ಡಿʼಸೋಜಾ ಅವರು ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ಮ್ಯಾಕೋ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಆಯೋಜಿಸಲಾದ ಬಿಪಿ ಮತ್ತು ಬ್ಲಡ್ ಶುಗರ್ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರುಗಳಾದ ರೆವ್. ಫಾದರ್ ಆಂಡ್ರ್ಯೂ ಲಿಯೋ ಡಿʼಸೋಜಾ ಅವರು ಶಿಬಿರವನ್ನು ಉದ್ಘಾಟಿಸಿದರು.

ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮುಂಚಿತವಾಗಿ ಪತ್ತೆಹಚ್ಚುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಸಾರ್ವಜನಿಕರ ಆರೋಗ್ಯ ಕಾಳಜಿ ಮತ್ತು ಸಾಮಾಜಿಕ ಸೇವೆಯ ದೃಷ್ಟಿಯಿಂದ ಮಹತ್ವದ್ದಾಗಿವೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಐವನ್ ಡಿ’ಸೋಜಾ, ಉದ್ಘಾಟಕರಾದ ರೆವರೆಂಡ್ ಫಾದರ್ ಆಂಡ್ರ್ಯೂ ಲಿಯೋ ಡಿ’ಸೋಜಾ, ಡಾ. ಕವಿತಾ ಡಿ’ಸೋಜಾ, ಉಪಾಧ್ಯಕ್ಷರಾದ ಸಿರಿಲ್ ಡಿ’ಸೋಜಾ, ನಿರ್ದೇಶಕರಾದ ಬಬಿತಾ ಡಿ’ಸೋಜಾ, ಭಾಸ್ಕರ್ ರಾವ್, ವಿದ್ಯಾ ಥೋರಸ್, ರಾಜೇಶ್, ಪಿ.ಪಿ. ವರ್ಗೀಸ್, ಶೋಹದ್ ಗೋಣಡ್ಕ ಹಾಗೂ ಕಾರ್ಯದರ್ಶಿಯಾದ ನಿಶಿತಾ, ದಿನೇಶ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *