ಕೆಸರೆರಚಾಟಕ್ಕೆ ಉತ್ತಮ ಸ್ಥಳದ ಹುಡುಕಾಟದಲ್ಲಿದ್ದಲ್ಲಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಲಿನ ರಸ್ತೆಗಳು ಉಚಿತವಾಗಿವೆ

ವರದಿ ರಾಯಿ ರಾಜ ಕುಮಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಏಳು ತಾಲೂಕುಗಳ ಸಾರ್ವಜನಿಕ ತಮ್ಮ ಜಿಲ್ಲಾಮಟ್ಟದ ಕೆಲಸಗಳಿಗೆ, ಜಿಲ್ಲಾಧಿಕಾರಿಗಳೊಂದಿಗೆ ನಡೆಯುವ ಮಾತುಕತೆಗೆ, ಜಿಲ್ಲಾ ದಂಡಾಧಿಕಾರಿಯವರ ಸಮಕ್ಷಮ ನಡೆಯುವ ಯಾವುದೇ ವಿಚಾರಣೆಗಳಿಗೆ ಸಾರ್ವಜನಿಕರು ಪ್ರಸ್ತುತ ಪಡೀಲಿನಲ್ಲಿರುವ ಜಿಲ್ಲಾಧಿಕಾರಿಯ ಕಚೇರಿಗೆ ಎಡತಾಕುವುದು ಸರ್ವೇಸಾಮಾನ್ಯವಾಗಿದೆ. ಆದರೆ ಪಡೀಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಮುತ್ತ ಇರುವ ರಸ್ತೆಯಲ್ಲಿ ಯಾರೇ ವ್ಯಕ್ತಿಗಳು ನಡೆದಾಡಿದರೆ ಗುರುತು ಹಿಡಿಯುವುದು ಬಹಳ ಕಷ್ಟ ಸಾಧ್ಯ. ಇದಕ್ಕೆ ಕಾರಣ ಆ ಇಡೀ ಪ್ರದೇಶ, ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಕೆಸರಿನಿಂದ ಆವೃತ್ತವಾಗಿರುವುದು.

ಆಗಮಿಸುವ ಸಾರ್ವಜನಿಕರು ಓಡಾಡುವ ವಾಹನಗಳಿಂದ ಯಾವ ಹೊತ್ತಿಗೆ ಕೆಸರು ಎರಚಲಾಗುತ್ತದೆ ಎಂಬ ಹೆದರಿಕೆಯಲ್ಲಿಯೇ ನಡೆದಾಡಬೇಕಾಗಿದೆ. ಕಚೇರಿಯ ಎದುರಿನಲ್ಲಿಯೇ ಕೆಸರು ನೀರು ನಿಂತು, ಸುತ್ತಲಿನ ಎಲ್ಲಾ ರಸ್ತೆಗಳು ಕೆಸರು ಮಯವಾಗಿರುವುದು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಶೋಭೆ ತರುವ ಸಂಗತಿಯೇ???

ಸಮರ್ಪಕ ಚರಂಡಿಯ ವ್ಯವಸ್ಥೆಗಳನ್ನು ಮಾಡಿ ನೀರು, ಕೆಸರು ಚರಂಡಿಯಲ್ಲಿ ಹೋಗುವಂತೆ ಮಾಡುವ ಅತಿ ಅಗತ್ಯತೆ ಇದೆ.

Leave a Reply

Your email address will not be published. Required fields are marked *