ಲೊರೆಟ್ಟೊ ಮಾತಾ ಚರ್ಚಿನ ನೂತನ ಧರ್ಮ ಗುರುಗಳಾಗಿ ವಂ. ಜೇಮ್ಸ್ ಡಿಸೋಜ ಅಧಿಕಾರ ಸ್ವೀಕಾರ

ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚಿನ ನೂತನ ಧರ್ಮ ಗುರುಗಳಾಗಿ ವಂ. ಜೇಮ್ಸ್ ಡಿಸೋಜ ರವರು ತಮ್ಮ ಸೇವ ಸ್ಥಾನದ ಅಧಿಕಾರ ವಹಿಸಿಕೊಂಡರು. 

36 ವರ್ಷಗಳ ಸುದೀರ್ಘ ಅನುಭವವುಳ್ಳ ಧರ್ಮ ಗುರುಗಳು ವೇಣೂರು ಬೆಳ್ತಂಗಡಿ, ವೆಲೆನ್ಸಿಯ ವಾಮಂಜೂರು ಹೀಗೆ ಏಳನೇ ಚರ್ಚ್ ಆಗಿ ಲೊರೆಟ್ಟೊ ಮಾತಾ ದೇವಾಲಯದ15 ನೆಯ ಧರ್ಮ ಗುರುಗಳಾಗಿ ಮೇ 21 ರಂದು ಅಧಿಕಾರ ವಹಿಸಿದರು. 

ಧರ್ಮ ಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ವಂ ಜೇಸನ್ ಮೊನಿಸ್, ಚರ್ಚ್ ಪಾಲನಾ ಪರಿಷದ್ ನ ಉಪಾಧ್ಯಕ್ಷರಾದ ಐಸಾಕ್ ವಾಸ್, ಕಾರ್ಯದರ್ಶಿ ಆಲ್ವಿನ್ ಪಿಂಟೊ, ಸರ್ವ ಆಯೋಗಗಳ ಸಂಯೋಜಕರಾದ ಸಚಿನ್ ನೊರೊನ್ಹಾ, ನಿರ್ಮಲ ಕಾನ್ವೆಂಟ್ ನ ಸೂಪರಿಯರ್ ಭಗಿನಿ ಇಡೊಲಿನ್ ರೊಡ್ರಿಗಸ್ ನೂತನ ಧರ್ಮ ಗುರುಗಳನ್ನು ಚರ್ಚ್ ದ್ವಾರದ ಬಳಿ ಚರ್ಚ್ ವ್ಯಾಪ್ತಿಯ ಭಕ್ತಾದಿಗಳಪರವಾಗಿ ಹೂವಿನ ಹಾರ ಹಾಕಿ ಅತ್ಮೀಯವಾಗಿ ಸ್ವಾಗತಿಸಿದರು. ಧರ್ಮ ಅಧ್ಯಕ್ಷರ ಪ್ರತಿನಿಧಿಯಾಗಿ, ಬಂಟ್ವಾಳ ವಲಯದ ಪ್ರಧಾನ ಧರ್ಮ ಗುರುಗಳಾದ ವಿಕ್ಟರ್ ಡಿಸೋಜ ರವರು ಸೇವಸ್ಥಾನದ ಪ್ರಾರ್ಥನಾ ಮಿತಿಯನ್ನು ನೆರವೇರಿಸಿದರು. ಮಂಗಳೂರು ಧರ್ಮ ಪ್ರಾಂತ್ಯದ ವಿವಿಧ ಚರ್ಚ್ ಗಳ ಧರ್ಮ ಗುರುಗಳು, ಭಗಿನಿಯರು ಹಾಗೂ ನೂರಾರು ಭಕ್ತಾದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *