ಓಟು ಮುಗಿಯಿತು! ಎಣಿಕೆ ಕಾರ್ಯ ಮುಗಿದು ಗೆದ್ದು ಗದ್ದುಗೆ ಏರುವುದು ಉಳಿದಿದೆ. ದೇಶದ ಒಳಿತಿಗಾಗಿ ಇನ್ನು ಮಾಡುವ ಕೆಲಸಗಳು ಒಂದಲ್ಲ ಎರಡಲ್ಲ. ಸಾಮಾಜಿಕ, ಧಾರ್ಮಿಕ, ನ್ಯಾಯಯುತ ಹಾದಿಯಲ್ಲಿ ಸಾಗಿ ಸತ್ಪಾತ್ರರೆಂದೆನಿಸಿ ಕೊಳ್ಳುವ ಮೂಲಕ ಭಾರತವನ್ನು  ಪ್ರತಿನಿಧಿಸಬೇಕು.  ಒಂದೇ ಕುಲ ಒಂದೇ ಮತ ಒಂದೇ ಮನುಜರು ಎಂಬ ತತ್ವ ಸಾಕಾರ ವಾಗಬೇಕು. ಕಾನೂನು  ಎಲ್ಲರಿಗೂ ಒಂದೇ ರೀತಿಯದ್ದಾಗಬೇಕು. 

 ಆಹಾರದ ಉತ್ಪಾದಕರಿಗೆ  ತಕ್ಕುದಾದ ಲಾಭ ದೊರೆಯಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಕೊಂಡುಕೊಳ್ಳುವ ಮತ್ತು ಕೊಡುವವರಲ್ಲಿ ಪಾರದರ್ಶಕ ವಹಿವಾಟು ನಡೆಸುವ ಗುರಿ ಇರಲಿ., ಬರಲಿ.  

ಎಲ್ಲವೂ ವ್ಯಾಪಾರಮಯವಾಗಬಾರದು. ನಿಸ್ವಾರ್ಥ ಸೇವೆ ಭಾರತ ಮಾತೆಯ ಮಡಿಲು ತುಂಬುವಂತಾಗಲಿ. ಆಕೆ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವಂತಹ ಮನಸ್ಸು ಎಲ್ಲರಲ್ಲೂ ಸದಾ ಇರಲಿ. ಕೋಟಿ ಸಂಪಾದಿಸಿದರೂ ಹಸಿವಾದಾಗ ಎರಡು ತುತ್ತು ಅನ್ನ ತಾನೇ ತಿನ್ನುವುದು. ಬರಿಗೈಲೇ ಬಂದವರು ಬರಿಗೈಲೇ ಹೋಗೋದು ತಾನೇ. ಅಂದ ಮೇಲೆ ಯಾಕೆ ಸ್ವಾರ್ಥ ಯಾಕೆ ದ್ವೇಷ. ತಿಂದವ ತಿಂದ. ಅವ ಹೇಲು ತಿಂದ ಎಂದು ಇವ ಹೇಲು ತಿನ್ನಲು ಹೋಗಬಾರದಲ್ಲಾ? 

ಬರುವಾಗ ಹೆಸರಿಲ್ಲ, ಹೋಗುವಾಗ ಉಸಿರಿಲ್ಲ ಕಾಯ ಅಳಿದ ಮೋಲೂ ಹೆಸರುಳಿಸಲು ಸಾಧಿಸೋ ಛಲ ಈಗ ಆಗಬೇಕಲ್ಲ... ರೆಡಿ ತಾನೇ? 


(ದ.ಕ ಲೇಖಕರು, ಕವಯಿತ್ರಿ )