ಮಂಗಳೂರಿನ ಪುರ ಭವನದಲ್ಲಿ ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಗೀತ ನಮನ ಕಾರ್ಯಕ್ರಮ ಮಾರ್ಚ್ 17ರ ಬೆಳಿಗ್ಗೆ ಆರಂಭವಾಯಿತು.
ಮೊದಲಿಗೆ ನಡೆದ ಸಭಾ ಕಾರ್ಯಕ್ರಮವನ್ನು ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ, ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಸೇರಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಆರಂಭದಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಅಪ್ಪು ನಮ್ಮೊಡನಿದ್ದಾರೆ ಎಂಬ ಮಾತಿಗೆ ಬಾವುಕರಾದರು.
ಇಂದು ಅಂಗಾಂಗ ದಾನ, ಕಣ್ಣು ದಾನ, ರಕ್ತ ದಾನ ಶಿಬಿರವನ್ನೂ ಈ ಸಂಬಂಧ ಹಮ್ಮಿಕೊಳ್ಳಲಾಗಿದೆ.
ಇಂದು ಇಡೀ ಲೋಕದಲ್ಲಿ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ 4,000ಕ್ಕೂ ಹೆಚ್ಚು ತೆರೆಗಳಲ್ಲಿ ಬಿಡುಗಡೆ ಆಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಉಪಮೇಯರ್ ಅಮಿತಕಲಾ ಅವರ ಜನ್ಮ ದಿನ ಕೂಡ ಇಂದೇ ಆಗಿದ್ದು ಅವರು ತಾವಾಗಿಯೇ ಬಂದು ಕಣ್ಣು ದಾನ ಪತ್ರಕ್ಕೆ ಸಹಿ ಮಾಡಿದರು.
ಪ್ರತಿ ಮನೆಯಲ್ಲೂ ಜನರು ಅತ್ತ ದಿನ ಎಂದರೆ ಅದು ಪುನೀತ್ ರಾಜ್‍ಕುಮಾರ್ ಸತ್ತ ದಿನ. ನಾವೆಲ್ಲ ಒಂದು ವಾರ ಭಾವಶೂನ್ಯರಾಗಿದ್ದೆವು ಎಂದು ತುಳು ನಟ ದೇವದಾಸ್ ಕಾಪಿಕಾಡ್ ಹೇಳಿದರು.