ಉಡುಪಿ ಕಿಡ್ಸ್ ಅಥ್ಲೆಟಿಕ್ಸ್ ಮೀಟ್‌- ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಮಂಗಳೂರು: ಉಡುಪಿಯಲ್ಲಿ ಜೂನ್ 7ರಂದು ನಡೆದ ಕಿಡ್ಸ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ನಗರದ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ವಿದ್ಯಾರ್ಥಿಗಳಾದ ಸ್ವರ ಶೆಟ್ಟಿ ಪಾರಕಂಡಿ ಹಾಗೂ ವಿಹಾನ್ ವಿಶಾಲ್ ಕುಮಾರ್ ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

8ನೇ ತರಗತಿಯ ವಿದ್ಯಾರ್ಥಿನಿ ಸ್ವರ ಶೆಟ್ಟಿ ಪಾರಕಂಡಿ 4×100 ಮೀ. ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ, 200 ಮೀ. ಓಟದಲ್ಲಿ ಬೆಳ್ಳಿ ಪದಕ ಹಾಗೂ 4×100 ಮೀ. ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದರು.
ಹಾಗೂ 7ನೇ ಬಿ ತರಗತಿಯ ವಿದ್ಯಾರ್ಥಿ ವಿಹಾನ್ ವಿಶಾಲ್ ಕುಮಾರ್ ಮಿಕ್ಸ್ಡ್ ರಿಲೇ ಹಾಗೂ 4×100 ಮೀ. ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಹಾಗೂ 80 ಮೀ. ಓಟದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಬ್ಬರ ಕ್ರೀಡಾ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರಾದ ವಂ.ರೆ.ಫಾ ರೋಹನ್‌ ಡಿ ಅಲ್ಮೇಡಾ ಎಸ್.ಜೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *