ಕಾರ್ಕಳ: ಕರ್ನಾಟಕ ಪರೀಕ್ಷಾ ಪ್ರಾಧೀಕಾರವು ಇಂಜಿನಿಯರಿಂಗ್ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗಾಗಿ ನಡೆಸುವ ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ.

ಈ ಬಾರಿ ಒಟ್ಟು 152 ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆ ಬರೆದಿದ್ದು ವಿಜ್ಞಾನ ವಿಭಾಗಕ್ಕೆ ಅಂಕಗಳ ಯಾವುದೇ ಮಿತಿ ಇಲ್ಲದೆ ದಾಖಲಾತಿ ನೀಡಿಯೂ ಅಗ್ರ ಇಪ್ಪತ್ತು ಸಾವಿರದ ಒಳಗೆ 129 ರ್ಯಾಂಕ್‍ಗಳನ್ನು ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಂಸ್ಥೆಯ ವಿದ್ಯಾರ್ಥಿ ವಿಜೇತ್ ಶೆಟ್ಟಿಗಾರ್ 236 ನೇ ರ್ಯಾಂಕ್ ಪಡೆದುಕೊಂಡಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಸುಮಂತ್ ಎನ್.ಕೆ 959 ನೇ ರ್ಯಾಂಕ್ ಪಡೆದಿದ್ದಾನೆ. ಉಳಿದಂತೆ ವಿಜೇತ್ ಆರ್ 1020 ನೇ ರ್ಯಾಂಕ್, ರೋಷನ್ ಥೋರಸ್ 2176ನೇ ರ್ಯಾಂಕ್, ದಿಶಾ ಡಿಮೆಲ್ಲೊ 2148ನೇ ರ್ಯಾಂಕ್, ಅಪೇಕ್ಷಾ ಜೈನ್ 2144ನೇ ರ್ಯಾಂಕ್, ಹೇಮಂತ್ ಗೌಡ 2100 ನೇ ರ್ಯಾಂಕ್, ಅನುಷ್ ಶೆಟ್ಟಿ 2381 ನೇ ರ್ಯಾಂಕ್, ಸಿಯಾ ವೆನಿಶಾ ಡಿಸೋಜ 3773 ನೇ ರ್ಯಾಂಕ್, ಸ್ಮ್ರತಿ ಮರಾಠೆ 4094ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸಂಸ್ಥೆಯು ಈ ಸಾಲಿನಲ್ಲಿ ಅಗ್ರ 500 ರ ಒಳಗೆ ಒಂದು, 1000 ದ ಒಳಗೆ ಎರಡು ರ್ಯಾಂಕ್‍ಗಳನ್ನು ಪಡೆದಿದೆ. ಉಳಿದಂತೆ ಐದು ಸಾವಿರದ ಒಳಗೆ 25, ಹತ್ತು ಸಾವಿರದ ಒಳಗೆ 63, ಹದಿನೈದು ಸಾವಿರದ ಒಳಗೆ 93 ಹಾಗೂ ಇಪ್ಪತ್ತು ಸಾವಿರದ ಒಳಗೆ 129 ರ್ಯಾಂಕ್‍ಗಳನ್ನು ಸಂಸ್ಥೆಯು ಪಡೆದುಕೊಂಡಿದೆ.
