ಆ. 14 ರಂದು ಕಾರ್ಕಳದ ಜೋಡುರಸ್ತೆಯ ಸಿಂಧೂರ ಕಾಂಪ್ಲೆಕ್ಸ್ ನಲ್ಲಿ ‘NP ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ ಉದ್ಘಾಟನೆ

ಕಾರ್ಕಳಕಾರ್ಕಳದ ಜೋಡುರಸ್ತೆ ಸಮೀಪವಿರುವ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನಲ್ಲಿ ನೂತನ ‘ಎನ್‌ಪಿ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್ಸ್‌’ ಮಳಿಗೆಯು ಆಗಸ್ಟ್ 14ರಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಒಂದೇ ಸೂರಿನಡಿ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲಾ ಬಗೆಯ ಗೃಹೋಪಯೋಗಿ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಒದಗಿಸುವ ಉದ್ದೇಶದಿಂದ ಈ ಬೃಹತ್ ಮಳಿಗೆಯನ್ನು ಆರಂಭಿಸಲಾಗುತ್ತಿದೆ ಎಂದು ಎನ್‌ಪಿ ಸಮೂಹದ ಅಧ್ಯಕ್ಷ ವಾಸುದೇವ ಭಟ್‌ ಆಗಸ್ಟ್ 11ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವ ಉದ್ಯಮಿಯ ಈ ಹೊಸ ಹೆಜ್ಜೆಗೆ ಕಾರ್ಕಳದ ಜನತೆ ಬೆಂಬಲ ನೀಡಬೇಕೆಂದು ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಕಡಾರಿ ರವೀಂದ್ರ ಪ್ರಭು ಹಾಗೂ ಅಮ್ಮನ ನೆರವು ಟ್ರಸ್ಟ್‌ನ ಅವಿನಾಶ್ ಶೆಟ್ಟಿ ಮನವಿ ಮಾಡಿದ್ದಾರೆ. ಆಧುನಿಕ ಸೌಲಭ್ಯಗಳೊಂದಿಗೆ ಆರಂಭವಾಗುತ್ತಿರುವ ಈ ಮಳಿಗೆಯು ಕಾರ್ಕಳದ ಜನತೆಗೆ ಹೊಸ ಅನುಭವ ನೀಡಲಿದೆ ಎಂದು ಡಾ. ರವೀಂದ್ರ ಶೆಟ್ಟಿ ಬಜಗೋಳಿ ಭರವಸೆ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಮಳಿಗೆ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಹಾಗೂ ಮಂಗಳೂರಿನಲ್ಲೂ ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಇಲ್ಲಿ ಲಭ್ಯವಾಗುವ ಗೃಹೋಪಯೋಗಿ ಉತ್ಪನ್ನಗಳು ಕಾರ್ಕಳದ ಮಾರುಕಟ್ಟೆಗೆ ಹೊಸ ಸ್ಪರ್ಶ ನೀಡಲಿವೆ.

ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ವಿಧ್ಯುಕ್ತ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಶಾಸಕ ರಘುಪತಿ ಭಟ್ ಹಾಗೂ ಉದಯ ಕೃಷ್ಣಯ್ಯ ಟ್ರಸ್ಟ್‌ನ ಉದಯ ಶೆಟ್ಟಿ ಮುನಿಯಾಲು ಮಳಿಗೆಯ ವಿವಿಧ ವಿಭಾಗಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಅಶ್ವತ್‌ ಎಸ್.‌ ಎಲ್.‌ ರವರು ವೆಬ್‌ಸೈಟ್‌ ಅನಾವರಣಗೊಳಿಸಲಿದ್ದಾರೆ.

ಸಿಂಧೂರ ಕಾಂಪ್ಲೆಕ್ಸ್ ನ ಮೂರು ಮಹಡಿಗಳ ಸುಮಾರು 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ NP ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಕಾರ್ಯಾಚರಿಸಲಿದ್ದು, ಕಾರ್ಕಳದ ಆಸುಪಾಸಿನ ಜನರಿಗೆ ಗುಣಮಟ್ಟದ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಉಪಕರಣಗಳು, ಮೊಬೈಲ್, ಲ್ಯಾಪ್ ಟಾಪ್ ಹಾಗೂ ಫರ್ನಿಯರ್ ಗಳನ್ನು ಆಕರ್ಷಕ ದರದಲ್ಲಿ ನೀಡುವ ಉದ್ದೇಶ ಹೊಂದಿದೆ ಎಂದರು.
ಶುಭಾರಂಭದ ಪ್ರಯುಕ್ತ ಆ. 14ರಿಂದ 25ರ ವರೆಗೆ ಪ್ರತೀ 10 ರಿಂದ 25 ಸಾವಿರ ಖರೀದಿಗೆ 1500 ಸಾವಿರ ಮೌಲ್ಯದ ಬಹುಮಾನ, 50 ಸಾವಿರ ವರೆಗಿನ ಖರೀದಿಗೆ 2,500 ಸಾವಿರ ಮೌಲ್ಯದ ಬಹುಮಾನ, 75 ಸಾವಿರ ವರೆಗಿನ ಖರೀದಿಗೆ 3,500 ಮೌಲ್ಯದ ಉಡುಗೊರೆ ಹಾಗೂ 75 ಸಾವಿರಕ್ಕೂ ಮಿಕ್ಕ ಖರೀದಿಗೆ 5 ಸಾವಿರ ಮೌಲ್ಯದ ಉಡುಗೊರೆ ನೀಡಲಾಗುವುದು ಎಂದರು. ಇದರ ಜೊತೆಗೆ ಕಾರ್ಕಳ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಸಾಗಾಟ ವ್ಯವಸ್ಥೆ ಇದೆ ಎಂದು ವಾಸುದೇವ ಭಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜಾಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ, ಕ್ರಯ ಓನರ್ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಬಜಗೋಳಿ, ಕಾರ್ಲ ಇವೆಂಟ್ಸ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ಎನ್‌ಪಿ ಗ್ರೂಪ್ಸ್ ನ ಮ್ಯಾನೇಜರ್ ಸೌಮ್ಯಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *