ಮಂಗಳೂರು, ಜೂ 11: 1 ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
















“ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ದಕ್ಷತೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಶಾಲೆಗೆ, ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಲಿ.” ಎಂದು ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರು ಮತ್ತು ಉರ್ವಾ ಇಮ್ಯಾಕ್ಯುಲೇಟ್ ಚರ್ಚಿನ ಧರ್ಮ ಗುರುಗಳಾಗಿರುವ ವಂ. ಗುರು ಬೆಂಜಮಿನ್ ಪಿಂಟೋ ರವರು 2026- 27 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಹಿತವಚನ ನುಡಿದರು.
ಉರ್ವಾ ಚರ್ಚ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜಾರವರು ಆಯ್ಕೆಯಾದ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ, ಶಿಸ್ತು ಬದ್ಧವಾಗಿ ಮತ್ತು ಜವಾಬ್ದಾರಿಯಿಂದ ತಮ್ಮ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಶಾಲಾ ನಾಯಕ 10 ನೇ “ಬಿ” ತರಗತಿಯ ಹರ್ಷವರ್ಧನ್ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ಉಪನಾಯಕಿ 9 ನೇ “ಎ” ತರಗತಿಯ ಜೈನ್ ಜೆರುಶಾ ಪಿಂಟೊ, ವಿರೋಧ ಪಕ್ಷದ ನಾಯಕರಾಗಿ 10 ನೇ “ಸಿ” ತರಗತಿಯ ಹಿಷಾಮ್ ಹಾಗೂ ಇತರ ನಾಯಕರು ಪ್ರತಿಜ್ಞೆ ಸ್ವೀಕರಿಸಿದರು.
10ನೇ ತರಗತಿಯ ಶಿಕ್ಷಕರು ಕಾರ್ಯಕ್ರಮ ಸಂಯೋಜಿಸಿದರು. 9 ನೇ “ಎ” ತರಗತಿಯ ರಿಧಿ ದಾಮೋದರ್ ಕಾರ್ಯಕ್ರಮ ನಿರೂಪಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
