ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆಯ ಕುರಿತಾಗಿ ಆರಕ್ಷಕ ಅಧಿಕಾರಿಗಳಿಂದ ತೆರೆದಮನೆ ಮಾಹಿತಿ ಕಾರ್ಯಾಗಾರ

ಅಜೆಕಾರ್, ಕಾರ್ಕಳ: ವಿದ್ಯಾರ್ಥಿಗಳ ಸುರಕ್ಷತೆ, ಬಾಲ ಹಕ್ಕುಗಳ ತಿಳುವಳಿಕೆ, ಸೈಬರ್ ಅಪರಾಧಗಳ ಜಾಗೃತಿ, ಮಕ್ಕಳ ಮತ್ತು ಮಹಿಳಾ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಅಭಿಯಾನ, ಸಂಚಾರಿ ನಿಯಮಗಳ ಪಾಲನೆ, ತುರ್ತು ಸಹಾಯದ ಕುರಿತಾದ ಮಹತ್ವದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿರುವ Sub inspector ಮಹೇಶ್ ರವರು, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹೇಗೆ ಬದುಕಬೇಕು, ಸೈಬರ್ ವಂಚನೆಗಳಿಂದ, ಮಾದಕ ವಸ್ತುಗಳಿಂದ ಹೇಗೆ ಮುಕ್ತರಾಗಿ ಪಾರಾಗಬೇಕು ಎಂಬುದರ ಬಗ್ಗೆ ತಿಳಿಸಿದರು. ಮಕ್ಕಳ ಕಲ್ಯಾಣ ಅಧಿಕಾರಿ ASI ಲಕ್ಷ್ಮಣ್ ಪ್ರಭು ವಿದ್ಯಾರ್ಥಿಗಳ ಸುರಕ್ಷತೆ, ಸಂರಕ್ಷಣೆ , ತುರ್ತು ಸಹಾಯದ ಕುರಿತಾಗಿ ಸಲಹೆ ಸೂಚನೆಯನ್ನು ನೀಡಿದರು. PC ರೂಪ ಅವರು ಪೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಯನ್ನು ತಿಳಿಸಿ, ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.
ಅಧಿಕಾರಿಗಳ ಸಮ್ಮುಖದಲ್ಲಿ, ಎಲ್ಲಾ ವಿದ್ಯಾರ್ಥಿಗಳು “ನಾನು ಕಾನೂನನ್ನು ಗೌರವಿಸುತ್ತೇನೆ, ಹಾಗೂ ಪಾಲಿಸುತ್ತೇನೆ, ಮಾದಕ ದ್ರವ್ಯಗಳಿಂದ ದೂರವಿರುತ್ತೇನೆ ಮತ್ತು ಜವಾಬ್ದಾರಿಯುತ ನಾಗರಿಕನಾಗುತ್ತೇನೆ ಎಂದು ಪ್ರಮಾಣ ವಚನವನ್ನು ಸ್ವೀಕರಿಸಿದರು.

ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸಂತೋಷ್ ರವರು ವಿದ್ಯಾರ್ಥಿಗಳನ್ನುದೇಶಿಸಿ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಅನೇಕ ಸಾಮಾಜಿಕ ಸವಾಲುಗಳ ನಡುವೆ ಬದುಕಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಅನಿವಾರ್ಯವಾಗಿದ್ದು, ಇಂತಹ ಮಾಹಿತಿ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ ಎಂದು ಧನ್ಯತೆಯ ನುಡಿಯನ್ನಾಡಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಆರತಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ನೆಲ್ಲಿಕಾರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ವಿಜೇತರಾಣಿ ಅತಿಥಿಗಳನ್ನು ಸ್ವಾಗತಿಸಿ , ವಂದಿಸಿ ನಿರೂಪಣೆಗೈದರು.

Leave a Reply

Your email address will not be published. Required fields are marked *