ವರದಿ ರಾಯಿ ರಾಜಕುಮಾರ
ಮೂಡುಬಿದಿರೆಯ ಹೆಸರಾಂತ ಬಿ ಆರ್ ಪಿ ಪ್ರೌಢಶಾಲಾ ಸ್ಥಾಪಕದ ದಿನಾಚರಣೆ ಜೂನ್ 12 ರಂದು ನಡೆಯಿತು. ಅದಾನಿ ಗ್ರೂಪ್ ನ ಮುಖ್ಯ ನಿರ್ದೇಶಕ ಕಿಶೋರ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಾಲಾ ವಿದ್ಯಾರ್ಥಿಗಳ “ರಾಜೇಂದ್ರ”ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡುತ್ತಿರುವುದು ಉತ್ತಮ ಕೆಲಸ. ಕಂಪನಿಯಿಂದ ಸಾಧ್ಯವಾದಷ್ಟು ಉತ್ತೇಜನಗಳನ್ನು ನೀಡಲಾಗುವುದು ಎಂದು ಭರವಸೆ ಇತ್ತರು.


ಎಂಸಿಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಾಹಕ ಚಂದ್ರಶೇಖರ್ ಎಂ ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು. ಪ್ರತಿ ವರ್ಷವೂ ಸಾಕಷ್ಟು ಸಹಾಯಧನವನ್ನು ಒದಗಿಸುತ್ತಿರುವ ಬಗ್ಗೆ ಮಾಜಿ ಸಚಿವ ಅಭಯ ಚಂದ್ರ ಜೈನ್ ನೆನಪಿಸಿದರು.
ಬಾಲ ಕಾರ್ಮಿಕ ವಿರೋಧಿ ಶಪಥವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾಡಿಸಲಾಯಿತು.
ಸಂಚಾಲಕ ರಾಮನಾಥ ಭಟ್ ಸ್ವಾಗತಿಸಿದರು. ವೆಂಕಟರಮಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ತೆರೆಸಾ ಕಾರ್ಡೋಜ ವಂದಿಸಿದರು.
