ವಲ್ಸಾಡ್ – ವೆಲಂಕಣಿ ನಡುವೆ ವಿಶೇಷ ರೈಲು ಸಂಚಾರ ಆರಂಭ

ಮುಂಬಯಿ, ಜು.01: ರೈಲು ಪ್ರಯಾಣಿಕರ ಬೇಡಿಕೆಯನ್ನು ಮನ್ನಿಸಿದ ಪಶ್ಚಿಮ ರೈಲ್ವೆಯು ವಲ್ಸಾಡ್ – ವೆಲಂಕಣಿ ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪಶ್ಚಿಮ ರೈಲ್ವೆಯು ಯಾತ್ರಿಗಳ ಬೇಡಿಕೆಗೆ ಅನುಗುಣವಾಗಿ `ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ವಲ್ಸಾಡ್ – ವೆಲಂಕಣಿ ರೈಲು ಸಂಚಾರ ಎರಡು ಟ್ರಿಪ್‍ಗಳ ಸಂಚಾರವನ್ನು ಘೋಷಿಸಿದೆ.

ಗುಜರಾತ್‍ನ ವಲ್ಸಾಡ್ ಮತ್ತು ತಮಿಳುನಾಡು ಅಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರ ವೆಲಂಕಣಿ ನಡುವೆ ವಿಶೇಷ ದರದಲ್ಲಿ ವೆಲಂಕಣಿ ವಿಶೇಷ ರೈಲುಗಳನ್ನಾಗಿಸಿ ರೈಲು ಸಂಚಾರ ಆರಂಭ ನಡೆಸಿದೆ. ರೈಲ್ವೆ ಮಂಡಳಿಯ ಅನುಮೋದನೆಯ ಮೇರೆಗೆ ಕೆಳಗಿನ ತಿಳಿಸಿದ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ 09030 ವಲ್ಸಾಡ್ -ವೆಲಂಕಣಿ ವಿಶೇಷ ರೈಲು ಜುಲೈ03 ಶುಕ್ರವಾರ ಸಂಜೆ 06:25 ಗಂಟೆಗೆ ವಲ್ಸಾಡ್‍ನಿಂದ ಹೊರಡಲಿದ್ದು ಮಾರನೆ ದಿನ (ಜು.04) ಶನಿವಾರ ಬೆಳಗ್ಗೆ 10:00 ಗಂಟೆಗೆ ವೆಲಂಕಣಿ ತಲುಪಲಿದೆ.

ರೈಲು ಸಂಖ್ಯೆ 09029 (ವೆಲಂಕಣಿ- ಡಹಾಣು ರೋಡ್ ವಿಶೇಷ ರೈಲು) ಜುಲೈ06 (ಭಾನುವಾರ ತಡರಾತ್ರಿ) ಅಂದರೆ ಸೋಮವಾರ ಮಧ್ಯರಾತ್ರಿ 00:30 ಗಂಟೆಗೆ ವೆಲಂಕಣಿಯಿಂದ ಹೊರಡಲಿದ್ದು, ಜುಲೈ07 ರಂದು ಬೆಳಗ್ಗೆ 10:30 ಗಂಟೆಗೆ ಡಹಾಣು ರೋಡ್ ತಲುಪಲಿದೆ. ಈ ವಿಶೇಷ ರೈಲು ಐಸಿಎಫ್ ಮಾದರಿಯ ಒಟ್ಟು 22 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 20 ಸ್ಲೀಪರ್ ಕ್ಲಾಸ್ (ಎಸ್‍ಸಿಎನ್) ಬೋಗಿಗಳು ಹಾಗೂ 2 ಎಸ್‍ಎಲ್‍ಆರ್/ ಡಿ ಬೋಗಿಗಳು ಇರಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳ ವಿವರಗಳನ್ನು ಐಸಿಎಂಎಸ್ ಮತ್ತು ಎನ್‍ಟಿಇಎಸ್ ವ್ಯವಸ್ಥೆಗಳಲ್ಲಿ ಅಪ್‍ಡೇಟ್ ಮಾಡಲಾಗಿದೆ.

ಈ ರೈಲು ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದ್ದು ಪ್ರಯಾಣದ ಹಾದಿಯಲ್ಲಿ ಡಹಾಣು ರೋಡ್, ಪಾಲ್ಘರ್, ವಸಾಯಿ ರೋಡ್, ಪನ್ವೇಲ್, ಲೋನಾವಾಲಾ, ಪುಣೆ, ದೌಂಡ್, ಸೋಲಾಪುರ, ಕಲಬುರಗಿ, ವಾಡಿ, ಯಾದಗಿರಿ, ಕೃಷ್ಣ, ಮಂತ್ರಾಲಯಂ ರೋಡ್, ಆದೋನಿ, ಗುಂಟಕಲ್, ತಾಡಿಪತ್ರಿ, ಯರಗುಂಟ್ಲ, ಕಡಪ, ರೇಣಿಗುಂಟ, ಕಟಪಾಡಿ, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ಚಿದಂಬರಂ, ಮೈಲಾಡುತುರೈ, ತಿರುನಲ್ಲಾರು, ಕಾರೈಕಲ್, ನಾಗೂರು ಮತ್ತು ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ (ರಿಸರ್ವೇಶನ್) ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ರೈಲ್ವೆ ವೆಬ್‍ಸೈಟ್ ಅಥವಾ ನಿಲ್ದಾಣದ ವಿಚಾರಣಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ಪಶ್ಚಿಮ ರೈಲ್ವೆ ಮೂಲವು ತಿಳಿಸಿದೆ.

(ಮಹಾರಾಷ್ಟ್ರ-ಆಂಧ್ರ ಪ್ರದೇಶ-ತಮಿಳುನಾಡು ಈ ಮೂರು ರಾಜ್ಯಗಳನ್ನು ಸಂಚಾರಿಸಲಿಸಲಿದ್ದು, ರೈಲು ಸಂಖ್ಯೆ 09030 (ವಲ್ಸಾಡ್ – ವೆಲಂಕಣಿ) ರೈಲು ವಲ್ಸಾಡ್ (06:25), ಡಹಾಣು ರೋಡ್ (07:55), ಪಾಲ್ಘರ್ (09:10), ವಸಾಯಿ ರೋಡ್ (10:00), ಪನ್ವೇಲ್ (11:50), ಲೋನಾವಾಲಾ (01:35), ಪುಣೆ (02:40), ದೌಂಡ್ (04:00), ಸೋಲಾಪುರ (07:55), ಕಲಬುರಗಿ (09:50), ವಾಡಿ (10:50), ಯಾದಗಿರಿ (11:28), ಕೃಷ್ಣ (12:00), ರಾಯಚೂರು (01:08), ಮಂತ್ರಾಲಯಂ ರೋಡ್ (02:48), ಆದೋನಿ (03:18), ಗುಂಟಕಲ್ (04:20), ಗೂಟಿ ಜಂಕ್ಷನ್ (05:08), ತಾಡಿಪತ್ರಿ (05:58), ಯರಗುಂಟ್ಲ (06:53), ಕಡಪ (07:33), ರಝಂಪೆಟ (08:23), ರೇಣಿಗುಂಟ (10:50), ಕಟಪಾಡಿ (01:50), ವೆಲ್ಲೂರು (02:18), ತಿರುವಣ್ಣಾಮಲೈ (03:30), ವಿಲ್ಲುಪುರಂ (04:40), ತಿರುಪ್ಪಡಿರಿಪುಲಿಯೂರು (05:23), ಚಿದಂಬರಂ (06:00), ಮೈಲಾಡುತುರೈ (06:43), ತಿರುನಲ್ಲಾರು (07:28), ಕಾರೈಕಲ್ (07:44), ನಗೋರೆ (08:00) ಮತ್ತು ನಾಗಪಟ್ಟಣಂ (08:20) ಮಾರ್ಗವಾಗಿ ಮಾರನೇ ದಿನ ಶನಿವಾರ (ಜು.04) ಬೆಳಗ್ಗೆ 10:00 ಗಂಟೆಗೆ ವೆಲಂಕಣಿ ತಲುಪುವುದು.

ಅಂತೆಯೇ ನಾಗಪಟ್ಟಣಂ (12:45), ನಾಗೂರು (01:06), ಕಾರೈಕಲ್ (01:26), ತಿರುನಲ್ಲಾರು (01:43), ಮೈಲಾಡುತುರೈ (02:30), ಚಿದಂಬರಂ (03:08), ತಿರುಪ್ಪಡಿರಿಪುಲಿಯೂರು (03:48), ವಿಲ್ಲುಪುರಂ (05:00), ತಿರುವಣ್ಣಾಮಲೈ (06:00), ವೆಲ್ಲೂರು (07:38), ಕಟಪಾಡಿ (08:45), ರೇಣಿಗುಂಟ (11:30), ರಝಂಪೆಟ (01:00), ಕಡಪ (01:50), ಯರಗುಂಟ್ಲ (02:27), ತಾಡಿಪತ್ರಿ (03:15), ಯರಗುಂಟ್ಲ (02:27), ತಾಡಿಪತ್ರಿ (03:15), ಗೂಟಿ ಜಂಕ್ಷನ್ (04:15), ಗುಂಟಕಲ್ (04:45), ಆದೋನಿ (05:40), ಮಂತ್ರಾಲಯಂ ರೋಡ್ (06:20), ರಾಯಚೂರು (07:05), ಕೃಷ್ಣ (08:10), ಯಾದಗಿರಿ (08:50), ವಾಡಿ (09:15), ಕಲಬುರಗಿ (09:55), ಸೋಲಾಪುರ (12:30), ದೌಂಡ್ (03:30), ಪುಣೆ (04:25), ಲೋನಾವಾಲಾ (05:40), ಪನ್ವೇಲ್ (07:00), ವಸಾಯಿ ರೋಡ್ (08:40), ಪಾಲ್ಘರ್ (09:30), ಮಾರ್ಗವಾಗಿ ಮಾರನೇ ದಿನ ಮಂಗಳವಾರ (ಜು.07) ಬೆಳಗ್ಗೆ 10:30 ಗಂಟೆಗೆ ಡಹಾಣು ರೋಡ್ ತಲುಪುವುದು. ಈ ಸೇವೆಗಳ ಪ್ರಯೋಜವನ್ನು ಪಡೆಯುವಂತೆ ಪಶ್ಚಿಮ ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಸೂಚಿಸಿದೆ.

Leave a Reply

Your email address will not be published. Required fields are marked *