ಕಾರ್ಕಳ: ನಮ್ಮ ವೀರ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 6 ಕೆ.ಎ.ಆರ್ ನೌಕಾ ಉಪಘಟಕ, ಎನ್ಸಿಸಿ, ಜುಲೈ 26 ರಂದು ಕಾರ್ಕಳದ ಅಮರ್ ಜವಾನ್ ಪಾರ್ಕ್ ನಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಿತು.

ಕಾರ್ಗಿಲ್ ಯುದ್ಧದ ವೀರರಿಗೆ ಗೌರವ ಸಲ್ಲಿಸಲು, ಕೆಡೆಟ್ ಗಳು ಭಾಷಣಗಳನ್ನು ಮಾಡಿದರು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಮಾಜಿ ಸೈನಿಕರು ಭಾಗವಹಿಸಿದ್ದರು.
