ಮಂಗಳೂರು: ಮಹೇಶ್ ಮೋಟರ್ಸ್ ಮಾಲಕ ಮಹೇಶ್ ಶೇಕ ವಿಧಿವಶ

ಮಂಗಳೂರು: ಕರ್ನಾಟಕ ಕರಾವಳಿಯ ಹೆಸರಾಂತ ಪ್ರತಿಷ್ಠಿತ ಸಾರಿಗೆ ಉದ್ಯಮಿ ಮಹೇಶ್ ಮೋಟರ್ಸ್ ಮಾಲಕರಾದ ಎ.ಕೆ ಜಯರಾಮ ಶೇಕರ ಪುತ್ರ ಸುಪುತ್ರ ಮಹೇಶ್ ಶೇಕ (49) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ಅಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು.

ಮೃತರು ತಂದೆ, ತಾಯಿ, ಪತ್ನಿ, ಸುಪುತ್ರಿ, ಅಣ್ಣ, ಅಕ್ಕ ಹಾಗೂ ತಂಗಿ ಸಹಿತ ಅಪಾರ ಸಂಖ್ಯೆಯ ಉದ್ಯಮಿಗಳು, ಸ್ನೇಹಿತರನ್ನು ಅಗಲಿದ್ದಾರೆ.

ಮಹೇಶ್ ಅವರ ಆತ್ಮೀಯ ನಗು, ಸರಳ ವ್ಯಕ್ತಿತ್ವ ಮತ್ತು ಪ್ರೀತಿಯ ನಡವಳಿಕೆ ಸದಾ ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಬಂಧು-ಬಳಗದವರಿಗೆ ನೀಡಲಿ ಎಂದು ಪ್ರಾಥಿಸುವುದಾಗಿ ಕರಾವಳಿಯ ಸಾರಿಗೆ ಉದ್ಯಮಿಗಳು, ಮಹೇಶ್ ಮೋಟರ್‍ಸ್ ಸಿಬ್ಬಂದಿಗಳು, ಹಿತೈಷಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.

ಮೃತರ ಅಂತ್ಯಕ್ರಿಯೆ: ಮೃತರ ಅಂತಿಮ ವಿಧಿ ವಿಧಾನಗಳು ಜುಲೈ,30, ಗುರುವಾರ ಬೆಳಿಗ್ಗೆ 10.00 ಗಂಟೆಗೆ  ಜ್ಯೋತಿ ಪ್ರಕಾಶ ನಿವಾಸ, ಕುಲಶೇಖರ ಮಂಗಳೂರು ಇಲ್ಲಿ ನಡೆಯಲಿರುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *