ಕರಾಟೆ ಪಂದ್ಯಾಟದಲ್ಲಿ ಗುಣಶ್ರೀ ವಿದ್ಯಾಸಂಸ್ಥೆಯ ಅನುಷ್‌ ಶೆಟ್ಟಿ, ಸಾಕ್ಷತ್ ಶೆಟ್ಟಿ, ಜಹಾನ್ ಕುಮಾ‌ರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಂಟ್ವಾಳ, ಸಿದ್ದಕಟ್ಟೆ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಯವರ ಕಛೇರಿ ಬಂಟ್ವಾಳ, ಪೀ.ಎಂ.ಶ್ರೀ ಸರಕಾರಿ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆ ದಡ್ಡಲ ಕಾಡು ಬಂಟ್ವಾಳ ಇವರ ಸಹಯೋಗದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಗುಣಶ್ರೀ ವಿದ್ಯಾಸಂಸ್ಥೆಯ ಅನುಷ್‌ ಶೆಟ್ಟಿ. ಸಾಕ್ಷತ್ ಶೆಟ್ಟಿ, ಜಹಾನ್ ಕುಮಾ‌ರ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಗುಣಶ್ರೀ ವಿದ್ಯಾಸಂಸ್ಥೆಯ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಮುಖ್ಯಶಿಕ್ಷಕಿಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿ, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

Leave a Reply

Your email address will not be published. Required fields are marked *