ಕೊಂಕಣಿಗೆ ಸಂವಿಧಾನ ಮಾನ್ಯತೆ ಆಗಸ್ಟ್ 20, 1992- Article by Raymond Dcunha Taccode

Raymond Dcunha Taccode
Editor in Chief, Pingara Newspaper & Pingara.com

ಸಾಂವಿಧಾನಿಕ ಮಾನ್ಯತೆ ದೊರೆತ ಒಟ್ಟು 22 ಭಾಷೆಗಳ ಪೈಕಿ ಕೊಂಕಣಿ ಇರುವುದು ಅದನ್ನು ನಾವು ಉಪಯೋಗಿಸುವ ಹಣಕಾಸು ನೋಟಿನ ಮೇಲೂ ಹಾಕಲು ಅವಕಾಶ ನೀಡಿದೆ.

1939ರಲ್ಲಿ ಕರ್ನಾಟಕದಲ್ಲಿ 8 ಜುಲೈ ಆಲ್ ಇಂಡಿಯಾ ಕೊಂಕಣಿ ಪರಿಷದ್ ಎಂಬ ಒಂದು ಕೊಂಕಣಿ ಚಳುವಳಿ ಮಾಧವ ಮಂಜುನಾಥ ಶಾನ್ ಭಾಗ್ ಕುಮಟಾ ಮುಖಾಂತರ ಆರಂಭವಾಯಿತು.
ನಂತರ ಅದನ್ನು ಗೋವಾದಲ್ಲಿ ನೊಂದಾವಣೆ ಗೊಳಿಸಿದರು.
1986 ಡಿಸೆಂಬರ್‌ 20 ಕೊಂಕಣಿ ಚಳುವಳಿ ಮಾಡುತ್ತಿರುವಾಗ 23 ವರ್ಷದ ಯುವಕರ ಪ್ಲೊರಿಯಾನೊ ವಾಜ್ ಗುಂಡಿನ ದಾಳಿಯಲ್ಲಿ ಬಲಿಯಾದರು.
ಈ ವಿಷಯ ಗೋಮಾಂತಕ್ ಟೈಮ್ಸ್ ಪ್ರಕಟಿಸಿದ ಮೇಲೆ ಕೊಂಕಣಿ ಗೋವಾದ ರಾಜ್ಯ ಭಾಷೆಯ ಚಳುವಳಿ ತೀವ್ರ ಆಯಿತು
1987 ಡಿಸೆಂಬರ್ 20‌ ಗೋವಾ ಕೊಂಕಣಿ ರಾಜ್ಯ ಆಗಿ‌ ಘೊಷಣೆ ಆಯಿತು.
ಕರ್ನಾಟಕದ ಕೊಂಕಣಿಗರು ಭಾಷೆಗೆ ಬೆಂಬಲ ಮತ್ತು ಸಂಘಟನೆ ಮಾಡಲು ಮುಂಚೂಣಿಯ ಕೆಲಸ ಮಾಡಿದ್ದಾರೆ.
1939 ರಲ್ಲಿ ಆಲ್ ಇಂಡಿಯಾ ಕೊಂಕಣಿ ಪರಿಷದ್‌ ಕರ್ನಾಟಕದ ಕುಮಟಾ ದವರು ಆರಂಭಿಸಿದರು. ನಂತರ ಗೋವಾದಲ್ಲಿ ನೊಂದಾವಣೆ ಮಾಡಲಾಯಿತು. ಈಗಲೂ ಅಲ್ಲಿಯೇ ಇದೆ.
1974 ರಲ್ಲಿ ಮಂಗಳೂರು ರಾಕ್ಣೊ ಪತ್ರಿಕೆಯ ಸಂಪಾದಕರಾದ ಫಾದರ್ ಮಾರ್ಕ್ ವಾಲ್ಡರ್ ತನ್ನ ಕಚೇರಿಯಲ್ಲಿ ಅವಕಾಶ ನೀಡಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಆರಂಭ ಮಾಡಲಾಯಿತು. ಕೊಂಕಣಿ ಭಾಷೆಯ ವರಕವಿ,ನಾಟಕಕಾರ ದಿವಂಗತ ಚಾಫ್ರಾ ದೆಕೊಸ್ತಾ ಸ್ಥಾಪಕ ಅಧ್ಯಕ್ಷರು ಮತ್ತು ಈಗಲೂ ವೀಜ್ ಡಿಜಿಟಲ್ ಕೊಂಕಣಿ ಪತ್ರಿಕೆ ನಡೆಸುವ ಆಸ್ಟಿನ್ ಡಿಸೋಜ ಪ್ರಭು ಕಾರ್ಯದರ್ಶಿ ಆದರು. ಈಗ 52 ವರ್ಷಗಳ ಈ ಸಂಸ್ಥೆಗೆ ರೇಮಂಡ್ ಡಿಕೂನಾ ತಾಕೊಡೆ ಅಧ್ಯಕ್ಷರಾಗಿ ಇದ್ದಾರೆ.
1974 ರಲ್ಲಿ ಆರಂಭಿಕ ದಿನಗಳಲ್ಲಿ ಕಲ್ಚರಲ್ ಮಿನಿಸ್ಟ್ರಿ ಜೊತೆಯಲ್ಲಿ ಸಂವಾದ ನಡೆಸುವ ಮೂಲಕ 1975ರಲ್ಲಿ ಕೇಂದ್ರ ಅಕಾಡಮಿ ಮಾನ್ಯತೆ ದೊರೆಯುವಲ್ಲಿ ಶ್ರಮಿಸಿದರು ಮಾತ್ರವಲ್ಲದೆ ಇಂದಿಗೂ ಕೇಂದ್ರ ಅಕಾಡೆಮಿಯ ಅಫಿಲೀಯೇಶನ್ ಇದೆ.
1992 ಆಗಸ್ಟ್ 20ರಂದು ಕೊಂಕಣಿಗೆ ಸಾಂವಿಧಾನಿಕ ಎಂಟನೆಯ ಪರಿಚ್ಛೇದದ ಮಾನ್ಯತೆ ದೊರೆಯುವ ಬಗ್ಗೆ ನಡೆದ ಗೋವಾದಲ್ಲಿ ಮತ್ತು ಕರ್ನಾಟಕ ದ ಎಲ್ಲಾ ಚಳುವಳಿಗಳಲ್ಲಿ ಸಕ್ರಿಯವಾಗಿ ಕೆಬಿಎಂಕೆ ಸದಸ್ಯರು ಪಾಲ್ಗೊಂಡರು.
1994ರಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ಫಾದರ್ ಪ್ರಶಾಂತ ಮಾಡ್ತ ಅವರು ಕೊಂಕಣಿ ಒಂದು ವರ್ಷದ ಡಿಪ್ಲೊಮಾ ಆರಂಭ ಮಾಡಿದರು. ಮೊದಲ ಬ್ಯಾಚ್ ನಿಂದ 1995ರಲ್ಲಿ ತೇರ್ಗಡೆ ಆದರು. ಹೀಗೆ ಕೊಂಕಣಿ ಕಲಿಕೆಯ ಆರಂಭ ಆಯಿತು
ಇದರ ತೀವ್ರತೆ ಜೋರಾಗಿ 1995ರಲ್ಲಿ ವಿಜೆಪಿ ಸಲ್ದಾನಾ ಮೊದಲ ಅಧ್ಯಕ್ಷರಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸರಕಾರ ಆರಂಭಿಸಿತು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇಡೀ ಲೊಕದ ಕೊಂಕಣಿ ಮಾತೃಭಾಷೆ ಜನರ ಒಟ್ಟಾಗುವಿಕೆ ಮಾಡಿದರು ಅದು ವರ್ಲ್ಡ್ ಕೊಂಕಣಿ ‌ಕೊನ್ಪರೆನ್ಸ್-1995.
ಇದರ ಖರ್ಚು ಕಳೆದು ಉಳಿಕೆಯ 13 ಲಕ್ಷದಲ್ಲಿ ಶಕ್ತಿನಗರದಲ್ಲಿ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನ ರಿಜಿಸ್ಟರ್ಡ್ ಮಾಡಿ ಕೆಬಿಎಂಕೆಯ ಏಳು ಮಂದಿ ಪದಾಧಿಕಾರಿಗಳು ಮೊದಲ ಎವರ್ಗದ ಟ್ರಸ್ಟಿಗಳು ಆಗಿರಬೇಕು ಎಂದು ನೊಂದಾವಣೆ ಮಾಡಿದರು.
2024 ಕೆಬಿಎಂಕೆಯ ಐವತ್ತು ವರ್ಷಗಳ ಆಚರಣೆ ಅಂದಿನ ಅಧ್ಯಕ್ಷರಾದ ಕೆ ವಸಂತ ರಾವ್ ಮತ್ತು ರೇಮಂಡ್ ಡಿಕೂನಾ ತಾಕೊಡೆ ಕಾರ್ಯದರ್ಶಿ ಮತ್ತು ಸಂಚಾಲಕ ಆಗಿ ಒಂದಿಡೀ ದಿನ ದೇಶ ವಿದೇಶಗಳ ಕೊಂಕಣಿ ಜನರು ಬಂದು ಆಚರಣೆ ಮಾಡಲಾಯಿತು. ಸ್ಥಾಪಕ ಕಾರ್ಯದರ್ಶಿ ಆಸ್ಟಿನ್‌ ಡಿಸೋಜ ಪ್ರಭು ಉದ್ಘಾಟನೆ ಮಾಡಿ, ಸ್ಥಾಪಕ ಖಜಾಂಚಿ ಫಾದರ್ ಮಾರ್ಕ್ ವಾಲ್ಡರ್ ಅಥಿತಿ ಆಗಿ ಮಾತನಾಡಿ ಹರಸಿದರು.

ಕೊಂಕಣಿ ವಿಶೇಷತೆಗಳು:
1)1975ರಲ್ಲಿ ಕೇಂದ್ರ ಅಕಾಡೆಮಿ ಮಾನ್ಯತೆ ಕೊಡುವಾಗ ದೇವನಾಗರಿ ಲಿಪಿ ಸಾಹಿತ್ಯದ ಬರಹಗಳು ಎಂದು ಉಲ್ಲೇಖ ಮಾಡಿದರು. ಆದರೆ ಕೊಂಕಣಿ ಐದು ಲಿಪಿಗಳಲ್ಲಿ ಬರೆಯುವ ಭಾಷೆ ಎಂದು ತಿಳಿದು ಇತರ‌ ಲಿಪಿಗಳಾದ ಕರ್ನಾಟಕದ ಕನ್ನಡ, ಕೇರಳದ ‌ಮಳಯಾಳ,ಗೋವಾದ ರೊಮಿ ಇಂಗ್ಲಿಷ್, ಇಂಡೊ ಪರ್ಸಿಯನ್ ಲಿಪಿಗಳಲ್ಲಿ ಬರೆದ ಉತ್ತಮ ಸಾಹಿತ್ಯ ದೇವನಾಗರಿಗೆ ಲಿಪ್ಯಂತರ ಮಾಡಿಯೂ ಗುರುತಿಸಲ್ಪಡುವ ವಾಗ್ದಾನ ಮಾಡಿದೆ.
ಒಂದು ಭಾಷೆಯ ಬೆಳವಣಿಗೆ ಸ್ಥಳೀಯ ಲಿಪಿಯ ಉಪಯೋಗ ಮಾಡಿ ಬೆಳೆದ ಅಪರೂಪದ ಘಟನೆ ಇದು ಮತ್ತು ಮೆಚ್ಚುಗೆ ಪಡೆದ ಕೊಂಕಣಿ ಜನರ ಅಡಾಪ್ಟೆಬಿಲಿಟಿ.
2) ಬಹು ಧರ್ಮದ ಜನರು ಮಾತನಾಡುವ ಭಾಷೆ ಕೊಂಕಣಿ. ಹಿಂದು,ಕ್ರೈಸ್ತ ಮತ್ತು ಮುಸ್ಲಿಮ್ ಎಲ್ಲಾ ಧರ್ಮದವರು ಕೊಂಕಣಿ ಮಾತನಾಡುತ್ತಾರೆ. ಕ್ರೈಸ್ತರು ಇಡೀ ಲೋಕದಲ್ಲಿ ಮಾತೃಭಾಷೆ ಎಂದು ಬರೆಯುತ್ತಾರೆ, ಬಡ್ಕಳದ ಮುಸ್ಲಿಮ್ ನವಾಯ್ತ್ ಎಂದು ಹೇಳಿಕೊಂಡು ತಮ್ಮ ಮಾತೃಭಾಷೆ ಕೊಂಕಣಿ ಎಂದು ನಮೂದಿಸುತ್ತಾರೆ.
ಹಿಂದೂಗಳು ಜಿಎಸ್‌ಬಿ ಆರ್‌ಎಸ್‌ಬಿ ಮತ್ತು ಪಂಗಡಗಳು, ಕುಡುಬಿಗಳು,ಖಾರ್ವಿ ಮೀನು ಹಿಡಿಯುವ ವೃತ್ತಿಪರ ಜನರು ತಮ್ಮ ಮಾತೃಭಾಷೆ ಕೊಂಕಣಿ ಎಂದು ನಮೂದಿಸಿ ಹೆಮ್ಮೆ ಪಡುತ್ತಾರೆ.
3)ಮಂಗಳೂರು, ಉಡುಪಿ, ಕಾರವಾರ, ಮತ್ತು ಕಾಸರಗೋಡು ಜಿಲ್ಲೆಯ ಕ್ರೈಸ್ತ ಬಿಷಪ್ ತಮ್ಮ ಎಲ್ಲಾ ಚರ್ಚುಗಳ ಪೂಜೆ ಮತ್ತು ಶಾಸ್ತ್ರದ ವಿಧಿಗಳು 365ದಿನಗಳು ಕೊಂಕಣಿ ಭಾಷೆಯಲ್ಲಿ ನೆರವೇರಿಸಿ ಕೊಂಕಣಿ ಉಳಿಸಲು ಬೆಳೆಸಲು ಮಹತ್ವದ ಕೊಡುಗೆ ನೀಡಿದ್ದಾರೆ.
4)ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಗೋವಾ, ದೆಹಲಿ, ಗಲ್ಫ್, ಮಧ್ಯಪ್ರಾಚ್ಯ, ಅಮೆರಿಕ, ಕೆನಡಾ, ಇಂಗ್ಲೆಂಡ್ ಮತ್ತು ಲೊಇಕದ ಎಲ್ಲಾ ದೇಶಗಳಲ್ಲಿ ಕೊಂಕಣಿ ಮಾತೃಭಾಷೆ ಜನರು ಇದ್ದಾರೆ.
ಸಂಸ್ಥೆಗಳು: 1939 ರಲ್ಲಿ ಆರಂಭ ಆದ 1) ಆಲ್ ಇಂಡಿಯಾ ಕೊಂಕಣಿ ಪರಿಷದ್ ಪ್ರಸ್ತುತ್ ಫಾದರ್ ಅಥಾಯ್ದ್ ಅಧ್ಯಕ್ಷರು
2) ಕವಿತಾ ಟ್ರಸ್ಟ್ ಅಧ್ಯಕ್ಷರು ಕಿಶು ಬಾರ್ಕೂರ್
3)ಅಖಿಲ್ ಭಾರತೀಯ ಕೊಂಕಣಿ ಚಾರೊಳಿ ಸಾಹಿತ್ಯ ಪರಿಷದ್ ಪ್ರಸ್ತುತ ರೇಮಂಡ್ ಡಿಕೂನಾ ತಾಕೊಡೆ ಆದ್ಯಕ್ಷರು
4) ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಕೊಂಕಣಿ ಭಾಷಾ ಮಂಡಳ್ ಇವೆ
5) ಸರಕಾರದ ವತಿಯಿಂದ
ನೊಂದಾಯಿತ ಮತ್ತು ಇತರ ಪ್ರಮುಖ ಕೊಂಕಣಿ ಸಂಸ್ಥೆಗಳು ನಿರಂತರ ಅನುದಾನ ರಹಿತ ಮತ್ತು
ಸಹಾಯದಿಂದ ಕೆಲಸ ಮಾಡಿ ಎಲ್ಲಾ ಲಿಪಿಗಳಲ್ಲಿ ಸಾಹಿತ್ಯ ಆಗುತ್ತದೆ.
ಕೊಂಕಣಿ ಪತ್ರಿಕೆಗಳು ಇವೆ.
ಜೈ ಕೊಂಕಣಿ.

Leave a Reply

Your email address will not be published. Required fields are marked *