ಮೂಡಬಿದಿರೆ, ಜ. 30: ಮೂಡಬಿದಿರೆ ಜೈನಕಾಶಿಗೆ ಗುರುವಾರ ಪರಮಪೂಜ್ಯ 105 ಅಯಿ೯ಕಾ ವಿಪುಲಾ ಮತಿ, ಪರಮಪೂಜ್ಯ 105 ವಿಮುಕ್ತ್ ಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ವಿಶಾಲ ಮತಿ ಮಾತಾಜಿ ಆಚಾರ್ಯ ವಿವೇಕ್ ಸಾಗರ (ಆಚಾರ್ಯ ಚಾಣಿವಾಲೆ ಶಾಂತಿ ಸಾಗರ ಮುನಿ ಮಹಾರಾಜ್ ಪರಂಪರೆ) ಶಿಷ್ಯೆಯರು ಜೈನಕಾಶಿ ಮೂಡುಬಿದಿರೆಗೆ ಅಲಂಗಾರು ಬಳಿಯಿಂದ ಪುರಪ್ರವೇಶ ಮಾಡಿ ಮೂಡುಬಿದಿರೆ ಜೈನಕಾಶಿ ಹದಿನೆಂಟು ಬಸದಿ ಶ್ರೀ ಮಠದಲ್ಲಿ ವಿರಾಜಮಾನಗೊಂಡ ಪರಮಾಗಮಗಳಾದ ಧವಳತ್ರಯ ಗ್ರಂಥ ದರ್ಶನ ಮಾಡಿದರು. ಅಪಾರ ಸಂಖ್ಯೆಯ ಶ್ರಾವಕ ಶ್ರಾವಿಕೆಯರು ವಿಹಾರದಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದ ಭಕ್ತ ವೃಂದವು ಮೂಡುಬಿದಿರೆ ಅಲಂಗಾರು ಬಡಗ ಬಸದಿ ಬಳಿಯಿಂದ ಬೆಳಿಗ್ಗೆ ಮಾತಾಜಿಗಳವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಬಳಿಕ ಶ್ರೀ ದಿಗಂಬರ ಜೈನ ಮಠದಲ್ಲಿ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರ ಅಭಿಷೇಕ, ಕುಷ್ಮಾಂಡಿನೀ, ಪದ್ಮಾವತಿ ದೇವಿಗೆ ಶೋಡಷೋಪಚಾರ ಪೂಜೆ, ಮಾತಾಜಿ ಸಂಘಕ್ಕೆ ಪಾದಪೂಜೆ ನೆರವೇರಿಸಲ್ಪಟ್ಟಿತು.
ಸಂಜಯಂತ ಕುಮಾರ್, ಶಂಬವ ಕುಮಾರ್, ಅನಂತ ವೀರ, ಎಸ್.ಪುಷ್ಪರಾಜ್, ಕೆ.ಸೂರಜ್, ವಿಜಯ ಕುಮಾರ್, ಅಡ್ವಕೇಟ್ ಶ್ವೇತಾ ಜೈನ್, ಸುದೇಶ್ ಕುಮಾರ್, ಪಟ್ಣ ಶೆಟ್ಟಿ, ಸುದೀಶ್ ಕುಮಾರ್ ಬೆಟ್ಕೇರಿ ಸುಧಾ ಪಾರ್ಶ್ವನಾಥ, ಆರ್.ವೀರೇಂದ್ರ, ಶ್ರೀ ದಿಗಂಬರ ಜೈನ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಮತ್ತಿತರ ಉಪಸ್ಥಿತರಿದ್ದರು.
