ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಂಬಿಕಾ ಎನ್, ಇವರು ಎ.ಜೆ ತಾಂತ್ರಿಕ ಮಹಾವಿದ್ಯಾಲಯದ, ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಂತಾ ಕುಮಾರಿ.ಕೆ, ಇವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆ ಮತ್ತು ಮಹಾಪ್ರಬಂಧ “ಕಾಂಟ್ರಿಬ್ಯುಶನ್ಸ್ ಟು ದ ಥಿಯರಿ ಆಫ್ ಜನರಲೈಸ್ಡ್ ಹೈಪೆರ್ ಜಿಯೋಮೆಟ್ರಿಕ್ ಫಂಕ್ಷನ್ ವಿದ್ ದೆಯರ್ ಅಪ್ಲಿಕೇಷನ್ಸ್” ಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ಪಿ.ಎಚ್ ಡಿ ಪದವಿಯನ್ನು ಘೋಷಿಸಿದೆ.

ಇವರು ಮುಂಡೋಳಿ ದಿ. ನಾರಾಯಣ ಶರ್ಮ ಹಾಗೂ ದಿ. ಶಶಿಕಲಾ ದಂಪತಿಗಳ ಪುತ್ರಿ, ಹಾಗೂ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ಕೆದುಕೋಡಿ ರಾಜೇಂದ್ರ ರಾವ್ ಕೆ ಇವರ ಧರ್ಮಪತ್ನಿ
