ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ: ಆಳ್ವಾಸ್‍ನ 8 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಶಿವಮೊಗ್ಗ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ – ಬಾಲಕಿಯರ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಹುಡುಗರ ವಿಭಾಗದಲ್ಲಿ 04 ಚಿನ್ನ, 01 ಬೆಳ್ಳಿ ಒಟ್ಟು 05 ಪದಕ ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲಿ 04 ಚಿನ್ನ, 01 ಬೆಳ್ಳಿ ಒಟ್ಟು 05 ಪದಕದೊಂದಿಗೆ ಎರಡು ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.
ಹುಡುಗರ ವಿಭಾಗದಲ್ಲಿ : 60 ಕೆಜಿ – ಸಂತೋಷ್ (ದ್ವಿತೀಯ), 71 ಕೆಜಿ – ಪ್ರಫುಲ್ (ಪ್ರಥಮ), 79 ಕೆಜಿ – ಪ್ರಜ್ವಲ್ (ಪ್ರಥಮ), 88 ಕೆಜಿ – ಶ್ರೇಯಸ್ (ಪ್ರಥಮ), 110 ಕೆಜಿ – ಜೇಷ್ಠ (ಪ್ರಥಮ).
ಹುಡುಗಿಯರ ವಿಭಾಗದಲ್ಲಿ : 48 ಕೆಜಿ – ಸಂಜನಾ (ದ್ವಿತೀಯ), 53 ಕೆಜಿ – ಸೌಮ್ಯ (ಪ್ರಥಮ), 58 ಕೆಜಿ – ಮೈತ್ರಿ (ಪ್ರಥಮ), 63 ಕೆಜಿ – ಅಪೂರ್ವ (ಪ್ರಥಮ), 86 ಕೆಜಿ – ಅಶ್ವಿನಿ (ಪ್ರಥಮ) ಪಡೆದುಕೊಂಡಿರುತ್ತಾರೆ.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *