ಮುಂಬಯಿ, ಸೆ.29: ಕಳೆದ ಸೋಮವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ (ರಾಜ್ಯಸಭಾ ಸಂಸದ) ಸಾರಥ್ಯದಲ್ಲಿ ನಡೆಸಲ್ಪಟ್ಟ ಮುಂಬಾಯಿ ಪ್ರದೇಶ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎನ್‌ಸಿಪಿ (ಎಸ್‌ಪಿ) ಪ್ರಧಾನ ಕಾರ್ಯದರ್ಶಿ ಮತ್ತು ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಎನ್‌ಸಿಪಿ ಯುವ ನೇತಾರ ಹಾಗೂ ಉತ್ತರ-ಪಶ್ಚಿಮದ ಉಪಾಧ್ಯಕ್ಷ ನಿರಂಜನ್ ಲಕ್ಷ ಣ್ ಪೂಜಾರಿ ಅವರನ್ನು ಆಯ್ಕೆಗೊಳಿಸಿದರು.

ಈ ಸಂದರ್ಭದಲ್ಲಿ ಮುಂಬಯಿ ಎನ್‌ಸಿಪಿ ಅಧ್ಯಕ್ಷ, ಮಾಜಿ ಶಾಸಕ ಮಿಲಿನ್ ಎ.ಕಾಂಬ್ಳೆ, ಉತ್ತಮ್‌ರಾವ್ ಮಾನೆ, ಸೋಯಾಲ್ ಸುಭೇಧರ್, ಎನ್‌ಸಿಪಿ ಹಿರಿಯ ಉಪಾಧ್ಯಕ್ಷ ಮತ್ತು ಆಡಳಿತಾಧಿಕಾರಿ ಚಿತ್ರಾಪು ಲಕ್ಷ್ಮಣ್ ಸಿ.ಪೂಜಾರಿ ಮತ್ತಿತರ ಧುರೀಣರು ಉಪಸ್ಥಿತರಿದ್ದರು.
