ಸಾಣೂರು, ಕಾರ್ಕಳ: ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜಿನ 5ನೇ ತರಗತಿಯ ವಿದ್ಯಾರ್ಥಿ ದೈವಿಕ್ ಭಂಡಾರಿ ಅವರು 2026 ರ ಆಗಸ್ಟ್ 16 ರಂದು ನಡೆದ ಮೂರನೇ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ – COMPETE-5.0 ರಲ್ಲಿ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಅದ್ಭುತ ಸಾಧನೆಗಾಗಿ ಶಾಲೆಯ ಆಡಳಿತ ಮಂಡಳಿ ದೈವಿಕ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು ಹಾಗೂ ಅವರ ಕ್ರೀಡಾ ಪಯಣವು ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
