ನಾನು ಲೇಖಕಿ ಅಲ್ಲ- ಅಂಜಲಿ ಶ್ರೀನಿವಾಸ್

✍️ಅಂಜಲಿ ಶ್ರೀನಿವಾಸ್ ಖಟವಟೆ

ನಾನು ಲೇಖಕಿ ಅಲ್ಲ
ಪದಗಳ ಪುಂಜ ನನ್ನಲ್ಲಿಲ್ಲ
ಬರೆದದ್ದು ಬದುಕಿನ ಕ್ಷಣಗಳ ಕೂಡಿಡಲು. ಹಾಂ ನಾನು ಒಂಚೂರು ಸ್ವಾರ್ಥಿ, ನಾ ಬರೆಯೋದು ನನಗಾಗಿ
ತುಳಿಯುವ ಬದಲು ತಿಳಿಯುವ ಪ್ರಯತ್ನದಲ್ಲಿ
ನನ್ನ ಭಾವನೆ, ನನ್ನ ಅನುಭವ
ಅಕ್ಷರಗಳ ಜೊತೆ ಹೊರಟ ಪಯಣ.
ಪ್ರತಿ ಕ್ಷಣವೂ ಹೊಸತು,
ಸೋತು ಕಲಿತದ್ದು,
ಅವಿತು ಕೂತ ಭಾವಗಳಿಗೆ ಪದವಾಗಿಸಿದ್ದು.

ಮೌನದಲ್ಲಿ ಮಾತು ಹುಡುಕುತ್ತಾ,
ಮಾತಿನಲ್ಲಿ ಮೌನದ ದನಿಯ ಕೇಳುತ್ತಾ,
ನನ್ನಲ್ಲಿ ನಾ ಕಳೆದು,
ನನ್ನನ್ನೇ ನಾ ಹುಡುಕಿಕೊಂಡದ್ದು

Leave a Reply

Your email address will not be published. Required fields are marked *