ಬದುಕು ಬದಲಿಸುವುದು ಹವ್ಯಾಸ – Article by Anjali Srinivas

ಓದು ಹಾಗೂ ಬರವಣಿಗೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ವಿಚಾರಗಳು  ಆಲೋಚನೆಗಳು ಅನುಭವಕ್ಕೆ ಬಂದಂತಹದ್ದು  ಕಂಡದ್ದು ಕೇಳಿದ್ದು ಅನುಭವಕ್ಕು ಮಿಗಿಲಾದದ್ದವುಗಳನ್ನು ಶಬ್ದಗಳ ಮೂಲಕ ಕಾಗದದಲ್ಲಿ ಇಳಿಸುವ ಕ್ರಿಯೆ. ನಾನು ಬರೆಯುವ ಲೇಖನಗಳಿಗೆ   ಪ್ರಶಂಸೆಗಳು ಬರುತ್ತದೆ . ಇನ್ನು  ಕೆಲವರು ಕೇಳುತ್ತಾರೆ  ಬರೆಯೋದರಿಂದ ದುಡ್ಡು ಬರುತ್ತ? ಇಲ್ಲಾ ಎಂದರೆ ಯಾಕ ಬೇಕು ಎನ್ನುವವ್ರೆ ಹೆಚ್ಚು ..ಕೆಲವೊಮ್ಮೆ ನಗು ಬರುತ್ತದೆ. ಈ ಸಮಾಜ ಇದೆಯಲ್ಲಾ ಹಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತದೆ. ‘ಒಬ್ಬ ಯಶಸ್ವಿ ವ್ಯಕ್ತಿಯನ್ನು ಅವನ ಆಸ್ತಿ’ ಮೂಲಕ ಅಳೆಯಲಾಗುತ್ತದೆ. ಅವನು ನೆಮ್ಮದಿಯಾಗಿದ್ದಾನೋ ಇಲ್ಲವೋ ಅದು ಬೇಡದ ಮಾತು ಅವನ ಹತ್ತಿರ ಹಣ ಇದೆ ಅವನೊಬ್ಬ ಯಶಸ್ವಿ ಪುರುಷ ಎಂಬ ಮನಸ್ಥಿತಿಯಲ್ಲಿದ್ದಾರೆ. ನಾನು ಬರೆಯುತ್ತಿರುವುದು ನನಗೋಸ್ಕರ ಪ್ರಶಂಸೆಗು ಪ್ರಶಸ್ತಿಗು ಅಲ್ಲ. ಬರವಣಿಗೆಯ ಅರಿತವನಿಗೆ ಮಾತ್ರ ಅರ್ಥವಾಗುತ್ತದೆ ಅದರ ಮಹತ್ವ.

ಬದುಕಿನಲ್ಲಿ ಸೋತು ಬಂದವರಿಗೆ ಶಬ್ದ ಸಾಂತ್ವನ  ನೀಡುತ್ತದೆ ಸಂಘರ್ಷಗಳಲ್ಲಿಯೂ ಹರ್ಷವನ್ನು ನೀಡುತ್ತದೆ. ಒಬ್ಬ ವ್ಯಕ್ತಿ ಖಿನ್ನತೆಗೋಳಗಾಗಿದ್ದರೆ ಮನೋವೈಧ್ಯ ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಿ ದಿನಚರಿ ಬರೆಯುವ ಹವ್ಯಾಸ ಬೆಳಿಸಿಕೊಳ್ಳಿ ಅನಿಸಿದ್ದು ಬರಿಯಿರಿ ಎಂದು ಸಲಹೆ ನೀಡುತ್ತಾರೆ. ನಮ್ಮನ್ನು ನಾವು ಅರಿಯುವ ಒಂದು ಅದ್ಭುತ ಮಾರ್ಗ ಅದೊಂದು  ಧ್ಯಾನದಂತೆ ನಮ್ಮಲ್ಲಿ ಏಕಾಗ್ರತೆ ಜ್ಞಾನರ್ಜನೆ ಸಂವಹನ ಸಾಮರ್ಥ್ಯ ಪ್ರೇರಣೆ ಸಹಾನುಭೂತಿ ನೆನಪಿನ ಶಕ್ತಿ ಬೆಳೆಸುತ್ತದೆ. ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳೆರಡು ಒಂದೇ ಸಂದರ್ಭಗಳನ್ನು ಉತ್ತಮಗೊಳಿಸುತ್ತದೆ. ಮನಸ್ಸನ್ನು ಕೇಂದ್ರೀಕರಿಸುವ ಕೌಶಲ್ಯ ವೃದ್ಧಿಸುತ್ತದೆ.

ಬದುಕು ಬದಲಾಯಿಸುತ್ತದೆ ನಮ್ಮ ಯೋಚನಾ ಲಹರಿಯನ್ನೇ ಬದಲಾಯಿಸುತ್ತದೆ. ಮನಸ್ಸನ್ನು ಶಾಂತವಾಗಿಡುತ್ತದೆ. ಪುಸ್ತಕ ಮಸ್ತಕಕ್ಕೆ ಹೊಳಪು ನೀಡುತ್ತದೆ. ಸ್ಥಿತಿವಂತ ಸುಖಿಯಲ್ಲ ಮನಸ್ಥಿತಿಯ ಮತಿಸ್ಥಿತಿಗಳೆರಡನು ಸ್ಥಿರವಾಗಿರಿಸುವವನು ಸುಖಿ ಮಾನಸಿಕ ನೆಮ್ಮದಿ ಸಂತೋಷದಿಂದ ಇರುವವನು ಸುಖಿ ಮಸ್ತಕ ಮತ್ತು ಮನಸ್ಸಿಗೆ ನೆಮ್ಮದಿಯಾಗಿರುವ ಸಾಧನವೇ ಈ ಓದು ಬರವಣಿಗೆ..ಸದಾ ನಮ್ಮಲ್ಲಿರುವ ನಮ್ಮನ್ನು ಪರಿಚಯಿಸುತ್ತದೆ.ಸದಾ ನವೀನತೆಯ ನೀಡುತ್ತದೆ.ನಿಮ್ಮ ಕಲ್ಪನಾಶಕ್ತಿಯನ್ನು ಹೆಚ್ಚಿಸಲು ಮತ್ತು ಮನಸ್ಸಿಗೆ ಆಹ್ಲಾದ ನೀಡಲು ಅತ್ಯುತ್ತಮ ಮಾರ್ಗವಾಗಿದೆ. 

✍️ಅಂಜಲಿ ಶ್ರೀನಿವಾಸ 

Leave a Reply

Your email address will not be published. Required fields are marked *