ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಲೊರೆಟ್ಟೊ: ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು.

ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಮುಖ್ಯೋಪಾಧ್ಯಾಯ ರೆ. ಜೇಸನ್ ಮೋನಿಸ್ ಅರ್ಪಿಸಿ, ದೇವರ ಆಶೀರ್ವಾದ ಕೋರಿದರು.

ಸಂಜೆ ಚರ್ಚ್‌ನಿಂದ ಸಭಾಂಗಣದವರೆಗೆ ಬ್ಯಾಂಡ್ ವಾದ್ಯಗಳ ಮೂಲಕ ಮೆರವಣಿಗೆ ನಡೆಯಿತು. ವೈಸಿಎಸ್ ವಿದ್ಯಾರ್ಥಿಗಳಿಂದ ಪ್ರಾರ್ಥನಾ ನೃತ್ಯ ನಡೆಯಿತು. ಐಸಿವೈಎಂ ಅಧ್ಯಕ್ಷ ಮೆಜ್ವಿಲ್ ಡಿಸೋಜಾ ಸ್ವಾಗತಿಸಿದರು, ಕಾರ್ಯದರ್ಶಿ ಶೈನಾ ರೋಡ್ರಿಗಸ್ ಮೂವತ್ತು ವರ್ಷಗಳ ಬಗ್ಗೆ ವರದಿ ಮಂಡಿಸಿದರು. ಬಂಟ್ಟಾಳ ವಲಯದ ಪ್ರಧಾನ ಧರ್ಮಗುರುಗಳಾದ ರೆ.ಫಾ. ವಿಕ್ಟರ್ ಡಿಸೋಜ, ಐಸಿವೈಎಂ ಇಂಡಿಯಾ ಮತ್ತು ಕಾರ್ಯದರ್ಶಿ ಹಾಗೂ ಸಿಸಿಬಿಐ ಯುವ ಆಯೋಗದ ನಿರ್ದೇಶಕರಾದ ರೆ.ಫಾ. ಚೇತನ್ ಮಚಾಡೊ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ಐಸಿವೈಎಂ ಬಂಟ್ವಾಳ ವಲಯ ನಿರ್ದೇಶಕ ರೆ.ಫಾ. ರಾಬರ್ಟ್ ಡಿಸೋಜ, ತೊಡಂಬಿಲ ಚರ್ಚ್ ಧರ್ಮಗುರುಗಳಾದ ರೆ.ಫಾ. ಆಂಟೋನಿ ಲೋಬೋ, ಲೊರೆಟ್ಟೊ ಧರ್ಮಕೇಂದ್ರದ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಮುಖ್ಯೋಪಾಧ್ಯಾಯ ರೆ.ಫಾ. ಜೇಸನ್ ಮೋನಿಸ್,ಐಸಿವೈಎಂ ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜಾ, ಮಂಗಳೂರು ಧರ್ಮಪ್ರಾಂತ್ಯ ಐಸಿವೈಎಂ ಅಧ್ಯಕ್ಷ ಪ್ರೇಮ್ ಜೀತನ್ ಪಿಂಟೋ ವಲಯ ಪಾಲನಾ ಮಂಡಳಿ ಉಪಾಧ್ಯಕ್ಷ ಐಸಾಕ್ ವಾಸ್, ಪಾಲನಾ ಮಂಡಳಿಯ ಕಾರ್ಯದರ್ಶಿ ಅಲ್ವಿನ್ ಪಿಂಟೋ, ಸರ್ವ ಆಯೋಗಗಳ ಸಂಯೋಜಕರಾದ ಸಚಿನ್ ನೊರೊನ್ಹಾ, ಭಗಿನಿಇಡೋಲಿನ್ ರೋಡ್ರಿಗಸ್ ಉಪಸ್ಥಿತರಿದ್ದರು.

ಮಾಣಿಕ್ಯ ಮಹೋತ್ಸವದ ಅಂಗವಾಗಿ ಐಸಿವೈಎಂ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಐರಿಕ್ ಸೈರಿಕ್ ಎಂಬ ಶೀರ್ಷಿಕೆಯ ಮೊದಲ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ಮೆಲಿಶಾ ಹಾಗೂ ಲಿಯಾನ್ನಾ ಪಿಂಟೋ ಕಾರ್ಯಕ್ರಮ ನಿರೂಪಿದರು ಸ್ಟಿನಲ್ ವಂದಿಸಿದರು. 30 ವರ್ಷಗಳ ಸೇವೆ ಸಂದರ್ಭ ರೆ.ಫಾ. ವಿಕ್ಟರ್ ಡಿಸೋಜಾ. ರೆ. ಫಾ. ಆಂಟೋನಿ ಲೋಬೋ, ರೆ.ಫಾ. ಓಸ್ವಾಲ್ಡ್ ಡಿಸೋಜಾ, ರೆ.ಫಾ. ಸಿಪ್ರಿಯನ್ ಪಿಂಟೋ, ರೆ.ಫಾ. ಎಲಿಯಾಸ್ ಡಿ’ಸೋಜಾ, ಮತ್ತು ಪ್ರಸ್ತುತ ರೆ. ಫಾ. ಫ್ರಾನ್ಸಿಸ್ ಕ್ರಾಸ್ತಾ ಚರ್ಚ್ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *