ಐವನ್ ಡಿʼಸೋಜಾ ನೇತೃತ್ವದಲ್ಲಿ 12ನೇ ವರ್ಷದ ದೀಪಾವಳಿ ಸಂಭ್ರಮಾಚರಣೆಯ ಪೂರ್ವಭಾವಿ ಸಭೆ

ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಅವರ ನೇತೃತ್ವದಲ್ಲಿ 12ನೇ ವರ್ಷದ ಭಾವೈಕ್ಯತೆಯ ಸಂಗಮ ದೀಪಾವಳಿ ಸಂಭ್ರಮಾಚರಣೆ ಇದೇ ನವೆಂಬರ್ 8, 2026ರ ಭಾನುವಾರ ಮಂಗಳೂರಿನ ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದ ಸಭಾಂಗಣದಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆಯಲಿದೆ.

ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ದೀಪಾವಳಿ ಸಂಭ್ರಮಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಚರ್ಚಿಸಿ, ವಿವಿಧ ಕಾರ್ಯಕ್ರಮಗಳಿಗಾಗಿ ಸಮಿತಿಯನ್ನು ರಚಿಸಲಾಯಿತು.

ಅಂದು ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆ, ಭರತನಾಟ್ಯ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಂಚಾಲಕರಾದ ಪ್ರದೀಪ್ ಬೇಕಲ್, ಮಾಜಿ ಕಾರ್ಪೊರೇಟರ್ ಜೆ. ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಜೇಮ್ಸ್ ಪ್ರವೀಣ್, ನೀತು ಡಿʼಸೋಜಾ, ಪ್ರಗತಿ ಬೇಕಲ್, ಅಲ್ಟ್ಸೈನ್ ಡಿಕುನ್ಹ, ಅಶ್ರಫ್ ಬೆಂಗ್ರೆ, ಮೇರಿ ಡಿʼಸೋಜಾ, ಲಿಡಿಯಾ ಡಿʼಸೋಜಾ, ಡೆನ್ನಿಸ್ ಪಾಯಸ್ ಮುಂಬೈ, ಮನೀಶ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *