ವಿಶ್ವಕೊಂಕಣಿ ಕೇಂದ್ರದಲ್ಲಿ ಮಕ್ಕಳ “ಬಾಲರಂಗ” 3 ದಿವಸಗಳ ಸನಿವಾಸ

ಮಂಗಳೂರು ವಿಶ್ವಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ‘ವರ್ಧನಿ’ ಪ್ರಾಯೋಜಕ್ತದಲ್ಲಿ ಮತ್ತು ಸಾಧನಾ ಬಳಗ ಸಹಕಾರದೊಂದಿಗೆ ಆಯೋಜಿಸಿದ “ಬಾಲರಂಗ” ಮಕ್ಕಳಿಗೆ  ನಾಟಕ ತರಬೇತಿ ನೀಡುವ  3 ದಿವಸಗಳ ಸನಿವಾಸ ಉಚಿತ ತರಬೇತಿ ಶಿಬಿರವನ್ನು  ಮಂಗಳೂರು ಎಮ್ ಆರ್ ಪಿ ಎಲ್ ನ ನಿವೃತ್ತ ಅಧಿಕಾರಿ  ಡಾ. ನರೇಶ್ ರಾಮದಾಸ ಕಿಣಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ನಡೆಸಿದರು. ಸಂಗೀತ, ನಾಟಕ, ನೃತ್ಯ, ರಂಗ ಪರಿಕರ ತಯಾರಿ, ಮುಖವಾಡ ತಯಾರಿ, ರಂಗ ಸಂಗೀತ ಹೀಗೆ ವಿವಿಧ ಕೌಶಲ್ಯ ಕಲೆಗಳ  ಅಭ್ಯಾಸವು ಪರೋಕ್ಷವಾಗಿ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುವುದು ಮತ್ತು ಈ ಬಗ್ಗೆಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ತರಬೇತಿ ನೀಡುವ ಕಾರ್ಯ ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿರುವುದು ತುಂಬಾ ಉಪಯುಕ್ತವಾಗಿದೆ ಶಿಬಿರದ  ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್ ರವರು ನೆರೆದ ಅತಿಥಿ ಗಣ್ಯರನ್ನುಸ್ವಾಗತಿಸಿದರು. ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಡಿ ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ, ಸತೀಶ ಪಿ ನೀನಾಸಂ, ಅರುಣ್ ಪ್ರಕಾಶ ನಾಯಕ, ಅಶೋಕ ನಾಯಕ, ಪುಷ್ಪಲತಾ ಭಟ್ ಹಾಗೂ ಶಿಬಿರ ಕಾರ್ಯಕ್ರಮದ ಪ್ರಾಯೋಜಕಿ ವರ್ಧನಿಯ ಉಷಾ ನಂದಗೋಪಾಲ ಶೆಣೈ  ಕಾಯ್ರಕ್ರಮದಲ್ಲಿ ಉಪಸ್ಥಿತರಿದ್ದರು.  ಸಾಧನಾ ಬಳಗದ ಮುಖ್ಯಸ್ಥ ಪ್ರಕಾಶ ಶ್ಶೆಣೈ ಶಿಬಿರದ ಸಂಕ್ಷಿಪ್ತ ವಿವರಣೆ ನೀಡಿದರು. ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ್ ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು. ಕೇಂದ್ರದ ಲಕ್ಷ್ಮೀಕಿಣಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿ ಶೈವಿಕಾ, ಅನ್ವಿತಾ, ಪ್ರಜಕ್ತಾ ಪ್ರಾರ್ಥಿಸಿದರು.

ಅ. 10 ರಂದು ಬಾಲರಂಗ ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ಆರಂಭದಲ್ಲಿ ಶಿಬಿರಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ಗೀತ ಗಾಯನ ಹಾಗೂ ನೃತ್ಯ ಪ್ರದರ್ಶನ ಮಾಡಿದರು ಮತ್ತು ತಾವು ಕಲಿತ ನಾಟಕದ ಮೊದಲ ತುಣುಕು ಪ್ರದರ್ಶಿಸಲ್ಪಟ್ಟಿತು. ಈ ನಾಟಕವನ್ನು ಹೆಸರಾಂತ ನಾಟಕ ದಿಗ್ದರ್ಶಕ ಜಗನ್ ಪವಾರ ಮತ್ತು ರಚನಕಾರ – ಪ್ರಕಾಶ ಶೆಣೈ ಹಾಗೂ ಬಣ್ಣ ತುಂಬಿದ – ಅರುಣ ಪ್ರಕಾಶ ನಾಯಕ್, ವಿನ್ಯಾಸ  -ಸತೀಶ್ ಪಿ ನೀನಾಸಂ, ಸಂಗೀತ- ಭಾವನಾ ಪ್ರಭು ,ಆಟ- ಪುಷ್ಪಲತಾ ಭಟ್, ನೄತ್ಯ-ಮಂಜುಳಾ ಕಾಮತ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ ಶೆಣೈ ನೆರೆದ ಗಣ್ಯರನ್ನು ಉದ್ದೇಶಿಸಿ ಮಾತನಾಡುತ್ತಾ “ಬಾಲರಂಗ” ಶಿಬಿರವು ಮಕ್ಕಳ  ಶಿಕ್ಷಣದೊಂದಿಗೆ ಅವರ ಮನಸ್ಸಿನ ಭಾವನೆಗಳನ್ನು ಹೊರ ತರುವುದಲ್ಲದೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುತ್ತದೆ. ಇದರಿಂದ ಎಳೆಯ ಮಕ್ಕಳಲ್ಲಿ ರಂಗಾಭಿನಯದ ಅಭಿರುಚಿ ಮೂಡಿ ಮಾತೃ ಭಾಷಾ ಅಭಿಮಾನವೂ  ಜಾಗೃತ ಗೊಳ್ಳುವುದು ಈ ನಿಟ್ಟಿನಲ್ಲಿ ತರಬೇತಿ ನೀಡುವ ಕಾರ್ಯಗಾರವನ್ನು ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿದೆ ಎಂದು ಮಕ್ಕಳಿಗೆ ಸ್ಪೂರ್ಥಿದಾಯಕ ಮಾತುಗಳಾನ್ನಾಡಿ, ಶಿಬಿರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು, ಸ್ವಯಂ ಸೇವಕರನ್ನು ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.

ಶಿಬಿರಾರ್ಥಿಗಳು ತಾವು 3 ದಿವಸಗಳ ತಮ್ಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿ ಸಂತೋಷ ಪಟ್ಟರು. ಕೇಂದ್ರದ ಲಕ್ಷ್ಮೀ ಕಿಣಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಅಶೋಕ ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು. ಒಟ್ಟು 3 ದಿವಸಗಳ ಸನಿವಾಸದ ಈ  ವಿಶೇಷ ‘ಬಾಲರಂಗ’ ಶಿಬಿರದಲ್ಲಿ ಸುಮಾರು  50 ಮಕ್ಕಳು ಉಚಿತ ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ನಾಟಕದ ವಿವಿಧ ಕಲೆಗಳ ತರಬೇತಿ ಪಡೆದರು.

Leave a Reply

Your email address will not be published. Required fields are marked *