ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 36 ವರ್ಷಗಳಿಂದ ಛಾಯಾಗ್ರಾಹಕರ ಹಿತಾಸಕ್ತಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ಸಂಸ್ಥೆಗೆ ಸರ್ಕಾರಿ ನಿವೇಶನ ಮಂಜೂರು ಮಾಡುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾರವರಿಗೆ ಮನವಿ ನೀಡಿದ್ದಾರೆ.

ಸುಮಾರು 4,500ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಸ್ಥೆಯು ಛಾಯಾಗ್ರಾಹಕರ ವೃತ್ತಿಪರ ತರಬೇತಿ, ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ನೆರವು, ಶೈಕ್ಷಣಿಕ ಮತ್ತು ಆರೋಗ್ಯ ಸಹಾಯ, ರಕ್ತದಾನ ಶಿಬಿರ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸಿದೆ.
ಸಂಸ್ಥೆಯು ಸ್ವಂತ ಕಟ್ಟಡವನ್ನು ಹೊಂದಿಲ್ಲದ ಕಾರಣ ಸಭೆಗಳು, ತರಬೇತಿ ಶಿಬಿರಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಮೀನನ್ನು ಸಂಸ್ಥೆಯ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಸಂಸ್ಥೆಯ ಸುದೀರ್ಘ ಸೇವೆ, ಛಾಯಾಗ್ರಾಹಕರ ಕಲ್ಯಾಣ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ, ಜಮೀನಿನ ಲಭ್ಯತೆ ಮತ್ತು ಕಾನೂನಾತ್ಮಕ ಅರ್ಹತೆಯನ್ನು ಪರಿಶೀಲಿಸಿ ನಿವೇಶನ ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿʼಸೋಜಾ ಅವರು ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ರವರಿಗೆ ಶಿಫಾರಸು ಮಾಡಿದ್ದಾರೆ.
ಈ ಸಂದರ್ಭದಲ್ಲಿ ನವೀನ್ ರೈ ಪಂಜಳ SKPA ಜಿಲ್ಲಾಧ್ಯಕ್ಷರು ಅಜಯ್ ಕುಮಾರ್ SKPA ಪ್ರಧಾನ ಕಾರ್ಯದರ್ಶಿವಿಠಲ್ ಚೌಟ SKPA ಮಾಜಿ ಸಂಚಾಲಕರು ಆನಂದ್ N ಬಂಟ್ವಾಳ್ SKPA ಮಾಜಿ ಜಿಲ್ಲಾಧ್ಯಕ್ಷರು ವಿಲ್ಪೈಡ್ ಮೆಂಡೋನ್ಸಾ SKPA ಜಿಲ್ಲಾ ಕಟ್ಟಡ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
